ಕಾನೂನುಬಾಹಿರವಾಗಿ ಮೀನುಗಾರಿಕೆ: ಬೋಟ್ ವಶ, ದಂಡ ಹೇರಿಕೆ
ಕಾಸರಗೋಡು: ಜಿಲ್ಲೆಯ ಸಮುದ್ರ ತೀರ ಪ್ರದೇಶದಲ್ಲಿ ಟ್ರೋಲ್ ಬಲೆ ಬಳಸಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕಣ್ಣೂರು ಅಳತ್ತಿಲಂ ಸುಬ್ರಹ್ಮಣ್ಯ ಎಂಬವರ ಮಾಲಕತ್ವದಲ್ಲಿರುವ ಮೀನು ಗಾರಿಕಾ ಬೋಟ್ ವಶಪಡಿಸಲಾಗಿದೆ.
ಫಿಶರೀಸ್ ಮರೈನ್ ಎನ್ಫೋ ರ್ಸ್ಮೆಂಟ್ ವಿಭಾಗದವರು ಬೇಕಲ ಕರಾವಳಿ ಪೊಲೀಸರ ಸಹಾಯ ದೊಂದಿಗೆ ನಿನ್ನೆ ಕಾರ್ಯಾಚರಣೆ ನಡೆಸಿದ್ದಾರೆ. ಹೀಗೆ ವಶಪಡಿಸಲಾದ ಬೋಟ್ಗೆ ಬಳಿಕ ಜುಲ್ಮಾನೆ ಹೊರಿಸಲಾಯಿತು.