ಕಾರಡ್ಕದಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ: ಪ್ರಾಥಮಿಕ ಸಮೀಕ್ಷೆ ಆರಂಭ

ಮುಳ್ಳೇರಿಯ: ಕಾರಡ್ಕ ನಾರ್ಲದಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಬಾಕ್ಸೈಟ್ ಗಣಿಗಾರಿಗೆ  ಆರಂಭಿಸುವುದರ ಪೂರ್ವಭಾವಿಯಾ ಗಿ ಪ್ರಾಥಮಿಕ ಸಮೀಕ್ಷೆ ನಡೆಸಲಾ ಯಿತು.  ರಾಜ್ಯ ಮೈನಿಂಗ್ ಆಂಡ್ ಜಿಯೋಲಜಿ ಎಡಿಶನಲ್ ಡೈರೆಕ್ಟರ್ ಎಂ.ಸಿ. ಕಿಶೋರ್‌ರ ನೇತೃತ್ವದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕಂದಾ ಯ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದರು. ಇಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ ಪತ್ತೆಹಚ್ಚಲಾಗಿದೆ. ಇದರಲ್ಲಿ ಎಷ್ಟು ಭೂಮಿ ಗಣಿಗಾರಿಕೆಗೆ ಲಭ್ಯವಾಗಲಿದೆಯೆಂಬುವುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗಿದೆ. ಮುಂದಿನ ವಾರ ಸಮಗ್ರವಾದ ಸಮೀಕ್ಷಾ ಕ್ರಮಗಳನ್ನು ಆರಂಭಿಸಲಾ ಗುವುದು. ಒಂದು ತಿಂಗಳೊಳಗೆ ಪೂರ್ತಿಗೊಳಿಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸ ಲಾಗಿದೆ. ಅರಣ್ಯ ಇಲಾಖೆಯ ಭೂಮಿಯಲ್ಲಿ ಮಾತ್ರವೇ ಗಣಿಗಾರಿಕೆ ನಡೆಸುತ್ತಿರು ವುದು. ಅದರಲ್ಲಿಯೂ ಮಣ್ಣು ಇರುವ ಪ್ರದೇಶಗಳನ್ನು ಹೊರತುಪಡಿಸಿ ಕಲ್ಲು ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಜನವಾಸವಲಯಕ್ಕೆ ಹೊಂದಿಕೊಂಡಿ ರುವ ಸ್ಥಳಗಳು, ಆರಾಧನಾಲಯಗಳಿ ರುವ ಸ್ಥಳಗಳು ಮೊದಲಾದವುಗಳನ್ನು ಹೊರತುಪಡಿಸಲಾಗುವುದು. ಇಷ್ಟು ಸ್ಥಳವನ್ನು ಹೊರತುಪಡಿಸಿದರೆ ೧೦೦ ಹೆಕ್ಟೇರ್ ಆದರೂ ನಾರ್ಲದಲ್ಲಿ ಗಣಿಗಾರಿಕೆಗೆ ಲಭಿಸಬಹುದೆಂಬ ನಿರೀಕ್ಷೆ ತಂಡಕ್ಕಿದೆ. 4-5 ಮೀಟರ್ ವರೆಗೆ ಆಳದಲ್ಲಿರುವ ಗಣಿಗಾರಿಕೆ ನಡೆಸಬಹುದು ಎಂಬುವುದು ಅಧಿಕಾರಿಗಳು ನೀಡುವ ಸೂಚನೆ.  ಗಣಿಗಾರಿಕೆ ನಡೆಸುವ ಸ್ಥಳಗಳನ್ನು ಕೃಷಿಗೆ ಹಾಗೂ ಇತರ ಅಗತ್ಯಗಳಿಗೆ ಉಪಯೋಗಿಸಲು ಸಾಧ್ಯವಾಗುವ ರೀತಿಯಲ್ಲಿ ಗಣಿಗಾರಿಕೆ ನಡೆಸಲಾಗು ತ್ತದೆ.  ಜಿಲ್ಲೆಯಲ್ಲಿ ನಾರ್ಲ ಹೊರತುಪ ಡಿಸಿ ಉಕ್ಕಿನಡ್ಕದಲ್ಲಿ 250 ಹೆಕ್ಟೇರ್ ಸ್ಥಳದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಬಹುದೆಂದು ಪತ್ತೆಹಚ್ಚಲಾಗಿದೆ. ಇದರಲ್ಲಿ ಹೆಚ್ಚಿನ ಸ್ಥಳ ಖಾಸಗಿಯಾ ಗಿದೆ.  ಇಲ್ಲಿ ಈ ಮೊದಲು   ಸಮೀಕ್ಷೆ ಕ್ರಮಗಳನ್ನು ಆರಂಭಿಸಿ  ಭೂಮಿ ಯನ್ನು ಪರಿಶೀಲಿಸಲಾಗಿದೆ.  ಎಷ್ಟು ಆಳದಲ್ಲಿ ಬಾಕ್ಸೈಟ್ ನಿಕ್ಷೇಪವಿದೆ ಯೆಂದು ಪತ್ತೆಹಚ್ಚಲು ಭೂಮಿಯನ್ನು ಕೊರೆದು  ಪರಿಶೀಲಿಸಲಾಗಿದೆ. ಇದರ ಸ್ಯಾಂಪಲ್‌ಗಳನ್ನು ಪರಿಶೀ ಲನೆಗಾಗಿ ಕಳುಹಿಸಿಕೊಡಲಾಗಿದೆ.  ಖಾಸಗಿ ಸ್ಥಳದಲ್ಲಿ ಗಣಿಗಾರಿಕೆ ನಡೆಸುವಾಗ ಜನರಿಗೆ ಆತಂಕ ಉಂಟಾಗಲು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾರ್ಲ ವಲಯದಲ್ಲಿ ಮೊದಲು ಗಣಿಗಾರಿಕೆ ನಡೆಸಲಾಗುತ್ತದೆ.  ಜಿಯೋಲಾಜಿ ಕಲ್ ಸರ್ವೇ ಆಫ್ ಇಂಡಿಯಾ ನಡೆಸಿದ ಅಧ್ಯಯ ನದಲ್ಲಿ ವಾಣಿಜ್ಯಪರ ವಾಗಿ ಗಣಿಗಾರಿಕೆ ಮಾಡಬಹುದಾದ ರೀತಿಯಲ್ಲಿ ಕಾಸರಗೋಡಿನ ವಿವಿಧ ಸ್ಥಳಗಳಲ್ಲಿ ಧಾತು ಲವಣಗಳ ಸಾನಿಧ್ಯವನ್ನು ಪತ್ತೆಹಚ್ಚಲಾಗಿದೆ. ಪರಿಶೀಲನೆ ಪೂರ್ತಿಗೊಂಡರೆ ಕೈಗಾರಿಕೆ ಇಲಾಖೆ  ಪ್ರಿನ್ಸಿಪಲ್ ಸೆಕ್ರೆಟರಿ ನೇತೃತ್ವ ನೀಡುವ ಉನ್ನತ ಮಟ್ಟದಸಮಿತಿ ಗಣಿಗಾರಿಕೆಗಿ ರುವ ಹರಾಜು ಪ್ರಕ್ರಿಯೆಗಳನ್ನು ನಡೆಸಲಿದೆ.

Leave a Reply

Your email address will not be published. Required fields are marked *

You cannot copy content of this page