ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಇನ್ನೋರ್ವ ಸೂತ್ರಧಾರ ಮಲೇಶ್ಯದಲ್ಲಿ; ಬಂಧಿತ ನಬೀಲ್‌ಗೆ ಪಾಕ್‌ನಿಂದ ಇಮೈಲ್ ಬಂದಿರುವುದಾಗಿ ಸೂಚನೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣ ದಲ್ಲಿ ಇನ್ನೋರ್ವ ಸೂತ್ರಧಾ ರನೂ ಒಳಗೊಂಡಿದ್ದಾನೆಂದು ಕ್ರೈಂ ಬ್ರಾಂಚ್ ತನಿಖೆಯಲ್ಲಿ ತಿಳಿದುಬಂದಿದೆ. ಕಣ್ಣೂರು ನಿವಾಸಿಯಾದ ಸೂತ್ರಧಾರ ಪ್ರಸ್ತುತ  ಮಲೇಶ್ಯಾದ ಲ್ಲಿದ್ದಾನೆ. ಆತ ಅಲ್ಲಿದ್ದುಕೊಂಡು ಇತರ ಆರೋಪಿಗಳ ಸಹಾಯದಿಂದ ಹಣ ಲಪಟಾಯಿಸಲು ತಂತ್ರ ಹೂಡಿದ್ದಾನೆಯೇ ಎಂದು ಮುಂದಿನ ತನಿಖೆಯಿಂದ ತಿಳಿಯಬಹ ದೆಂದು ತನಿಖಾ ತಂಡ ನಿರೀಕ್ಷೆ ವ್ಯಕ್ತಪಡಿಸಿದೆ. ಇದೇ ವೇಳೆ ಈಗಾಗಲೇ  ಸೆರೆಗೀಡಾದ ಇನ್ನೋರ್ವ ಸೂತ್ರಧಾರ ಕಲ್ಲಿಕೋಟೆ ರಾಮನಾಟುಕರ ನಿವಾಸಿ ನಬೀಲ್ (42) ಎಂಬಾತನಿಗೆ ಪಾಕಿಸ್ತಾನದಿಂದ ಇಮೈಲ್ ಸಂದೇ ಶವೊಂದು ಬಂದಿರುವುದಾಗಿಯೂ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂದೇಶ ಕಳುಹಿಸಿದವರು ಯಾರು ಸೊಸೈಟಿ ವಂಚನೆಗೂ ಅದಕ್ಕೂ ಸಂಬಂಧವಿದೆಯೇ ಎಂದು ಕೂಡಾ ತನಿಖೆಯಲ್ಲಿ ತಿಳಿಯಬೇಕಾಗಿದೆ. ನಬೀಲ್‌ನನ್ನು ತನಿಖಾ ತಂಡ ತನಿಖೆಗೊಳಪಡಿಸಿದ ಬಳಿಕ ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ.

ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಸೊಸೈಟಿಯ  ಕಾರ್ಯದರ್ಶಿ ಕರ್ಮಂತೋಡಿ ಬಾಳಕಂಡದ ಕೆ. ರತೀಶನ್, ಕಣ್ಣೂರು ಚೊವ್ವ ನಿವಾಸಿಯೂ ಪಯ್ಯನ್ನೂರಿನಲ್ಲಿ ವಾಸಿಸುವ ಜಬ್ಬಾರ್ ಯಾನೆ ಮಂಞಕಂಡಿ ಅಬ್ದುಲ್ ಜಬ್ಬಾರ್ ಎಂಬಿವರನ್ನು ತನಿಖೆಗೊಳಪಡಿಸಿದಾಗ ನಬೀಲ್‌ನ ಕುರಿತು ಮಾಹಿತಿ ಲಭಿಸಿತ್ತು.

ಸೊಸೈಟಿಯಿಂದ ಲಪಟಾಯಿಸಿದ ಚಿನ್ನಾಭರಣಗಳನ್ನು ಬೇರೆ ಬ್ಯಾಂಕ್‌ಗಳಲ್ಲಿ ಅಡವಿರಿಸಿದ ಸಂಬಂಧ ಮೂರು  ಮಂದಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಅನಂತರ ಸೆಕ್ರೆಟರಿ ರತೀಶನ್, ಸಹಚರ ಅಬ್ದುಲ್ ಜಬ್ಬಾರ್ ಹಾಗೂ ಸೂತ್ರಧಾರ ನಬೀಲ್ ಎಂಬಿವರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 6ಕ್ಕೇರಿದೆ.

Leave a Reply

Your email address will not be published. Required fields are marked *

You cannot copy content of this page