ಕಾರನ್ನು ಬಸ್ಗೆ ಅಡ್ಡ ನಿಲ್ಲಿಸಿ ತಂಡದಿಂದ ಕಂಡಕ್ಟರ್ಗೆ ಹಲ್ಲೆ
ಕುಂಬಳೆ: ಕಾರನ್ನು ಖಾಸಗಿ ಬಸ್ಗೆ ಅಡ್ಡ ನಿಲ್ಲಿಸಿದ ತಂಡವೊಂ ದು ಕಂಡಕ್ಟರ್ಗೆ ಹಲ್ಲೆಗೈದ ಘಟನೆ ನಡೆದಿದೆ. ಹಲ್ಲೆಯಿಂದ ಗಾಯ ಗೊಂಡ ಕೊಡಿಯಮ್ಮೆ ಚೆಕ್ಪೋಸ್ಟ್ ನಿವಾಸಿ ಮುಸ್ತಫ (೨೨) ಎಂಬ ವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿ ಲಾಗಿದೆ. ನಿನ್ನೆ ಸಂಜೆ ಪೆರ್ಮುದೆ ಬಳಿಯ ಮುನ್ನೂರು ಎಂಬಲ್ಲಿ ನಡೆದಿದೆ.
ಮುಸ್ತಫ ಕುಂಬಳೆ- ಬಂದ್ಯೋಡು- ಪೆರ್ಮುದೆ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ನ ಕಂಡಕ್ಟರ್ ಆಗಿದ್ದಾರೆ. ನಿನ್ನೆ ಸಂಜೆ ಪ್ರಯಾಣಿಕರನ್ನು ಇಳಿಸಿ ಬಸ್ ಮುನ್ನೂರು ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂರು ತಂಡ ಅಡ್ಡಗಟ್ಟಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.