ಕಾರುಗಳು ಢಿಕ್ಕಿ ಹೊಡೆದು ಆರು ಮಂದಿ ಜಖಂ
ಕಾಸರಗೋಡು: ಚಟ್ಟಂಚಾಲ್‌ಗೆ ಸಮೀಪದ ತೆಕ್ಕಿಲ್ ಆಲಟ್ಟಿ ರಸ್ತೆಯಲ್ಲಿ ನಿನ್ನೆ ಸಂಜೆ ಕಾರುಗಳೆರಡು ಪರಸ್ಪರ ಢಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡಿದ್ದಾರೆ. ವೈಶಾಖ್ ಎಂಬಾತ ಚಲಾಯಿಸುತ್ತಿದ್ದ ಕಾರು ಹಾಗೂ ಇನ್ನೊಂದು ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಚೂರಿತ್ತೋಡು ನಿವಾಸಿ ವೈಶಾಖ್, ಬಾರೋಟ್ಟಿಯ ಪ್ರತಾಪ್, ಚೂರಿತ್ತೋಡಿನ ಹೋಟೆಲ್ ವ್ಯಾಪಾರಿ ಯೂಸುಫ್, ಪಾಂಡಿಕಂ ಡದ ಮಹಮ್ಮದ್ ಕುಂಞಿ, ಮೊಯ್ದೀನ್ ಕುಂಞಿ ಮತ್ತು ಹಬೀಬ್ ಎಂಬವರು ಗಾಯಗೊಂ ಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.