ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು: ವಾಹನ ಪರಾರಿ
ಕಾಸರಗೋಡು: ಅಪರಿಮಿತ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ನಡೆದಿದೆ. ಪೆರಿಯ ಬಳಿಯ ಚೇರ್ಕಪ್ಪಾರದಲ್ಲಿ ವಾಸಿಸುವ ಬೀವಿ ಎಂಬವರ ಪುತ್ರ ಉಬೈದ್ (೪೯) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ ೭.೩೦ರ ವೇಳೆಗೆ ಚೇರ್ಕಪ್ಪಾರದ ಕ್ಲಬ್ ಸಮೀಪ ಅಪಘಾತ ಸಂಭವಿಸಿದೆ. ಪೆರಿಯ ಭಾಗದಿಂದ ಪಾಕಂಭಾಗಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಅಪಘಾತ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದೆ.
ಗಂಭೀರ ಗಾಯಗೊಂಡ ಉಬೈದ್ರನ್ನು ನಾಗರಿಕರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪಳ್ಳಿಪ್ಪುಳ ನಿವಾಸಿಯಾದ ಉಬೈದ್ ಹಾಗೂ ತಾಯಿ ಇತ್ತೀಚೆಗಷ್ಟೇ ಚೇರ್ಕಪ್ಪಾರದಲ್ಲಿ ವಾಸ ಆರಂಭಿಸಿದ್ದರು. ಅಪಘಾತ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಪಘಾತ ಸೃಷ್ಟಿಸಿದ ಕಾರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.