ಕಾರು ಬೆಂಕಿಗಾಹುತಿ: ಓರ್ವ ಮೃತ್ಯು
ಇಡುಕ್ಕಿ: ಕುಮಳಿಯಲ್ಲಿ ನಿನ್ನೆ ರಾತ್ರಿ ಕಾರೊಂದು ಬೆಂಕಿಗಾಹುತಿಯಾಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಕುಮಳಿ ನಿವಾಸಿ ರೋಯ್ ಸೆಬಾಸ್ಟಿಯನ್ ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಕಾರಿಗೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಯಲು ಪೊಲೀಸರು ಇಂದು ಸಮಗ್ರ ಪರಿಶೀಲನೆ ನಡೆಸಲಿದ್ದಾರೆ. ನಿನ್ನೆ ರಾತ್ರಿ 8 ಗಂಟೆವೇಳೆ ಕೊಟ್ಟಾರಕ್ಕರ -ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.