ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ಇಬ್ಬರು ಸಾವು; 15 ಮಂದಿ ಚಿಂತಾಜನಕ
ಯಾದಾದ್ರಿ: ತೆಲಂಗಾನದ ಯಾದಾದ್ರಿ ಪ್ರೀಮಿಯರ್ ಸ್ಪೋಟಕ ಕಾರ್ಖಾನೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು 18 ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಭುವನಗಿರಿ ಜಿಲ್ಲೆಯ ಯಾದಗಿರಿ ಗುಟ್ಟಮಂಡಲದಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ.
ಮೃತರಲ್ಲಿ ಓರ್ವನನ್ನು ಬಚ್ಚನ್ನಪೇಟೆ ನಿವಾಸಿ ಕನಕಯ್ಯ ಎಂದು ಗುರುತಿಸಲಾಗಿದೆ. ಇನ್ನೊಬ್ಬನನ್ನು ಗುರುತುಹಚ್ಚಲು ಸಾಧ್ಯವಾಗಲಿಲ್ಲ. ವಿಷಯ ತಿಳಿದ ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಂಭೀರ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.