ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ‘ಶ್ರೀಭಾಗ್ಯ’ ಬಿಡುಗಡೆ
ಬದಿಯಡ್ಕ: ಕಾರ್ಮಾರು ಕ್ಷೇತ್ರಕ್ಕೆ ಸನಾತನ ಧರ್ಮೀಯರ ಒಲವು ನಿರಂ ತರ ಹರಿದು ಬರಲಿ. ಗ್ರಾಮೀಣ ಪ್ರದೇ ಶದಲ್ಲಿ ಕಾರಣಿಕವಾದ ದೇವಸ್ಥಾನದ ಪುನರುದ್ಧಾರಕ್ಕೆ ಪಣತೊಟ್ಟ ಬಂಧು ಗಳು ನಿಜವಾಗಿಯೂ ಅಭಿನಂದ ನಾರ್ಹರು ಎಂದು ಉದ್ಯಮಿ ಶಿವಶಂಕರ ನೆಕ್ರಾಜೆ ಹೇಳಿದರು.
ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವದ ಧನ ಸಂಗ್ರಹಕ್ಕಾಗಿ ಶ್ರೀ ಮಹಾವಿಷ್ಣು ಯುವಕ ವೃಂದದ ಆಶ್ರಯದಲ್ಲಿ ಹಮ್ಮಿಕೊಂಡ `ಶ್ರೀಭಾಗ್ಯ’ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಭಟï ಕಾರ್ಮಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಶಕ್ತಿಮೀರಿ ಪ್ರಯತ್ನಿಸಬೇಕು. ಊರಿನ ದೇವಾಲಯದಲ್ಲಿ ಸೇವೆಯನ್ನು ಮಾಡುವ ಮೂಲಕ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜನಪ್ರತಿನಿದಿs ಶ್ಯಾಮ ಪ್ರಸಾದ್ ಕೆ, ಕಾರ್ಯಾಧ್ಯಕ್ಷ ರಾಮ ಕೆ, ಉದ್ಯಮಿ ಸಂತೋಷ್ ಕುಮಾರ್ ಎಸ್., ಗೋಪಾಲ ಭಟï ಪಿ ಎಸ್., ಕ್ಷೇತ್ರದ ಅರ್ಚಕ ಕೃಷ್ಣ ಪ್ರಸಾದ್ ಬೆಂಗ್ರೋಡಿ, ಯುವಕ ವೃಂದದ ಕಾರ್ಯದರ್ಶಿ ಗೋಕುಲ ಶರ್ಮ, ಕೋಶಾದಿsಕಾರಿ ರಾಜೇಶ್ ಕಾರ್ಮಾರು, ಪುರುಷೋತ್ತಮ ಕಾರ್ಮಾರು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾದಿsಕಾರಿ ರಂಜಿತ್ ಯಾದವ್ ವಂದಿಸಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ನಿರೂಪಿಸಿದರು.