ಕಾರ್ಮಿಕರನ್ನು ಮರೆತ ಸರಕಾರಗಳ ವಿರುದ್ಧ ಬ್ಯಾಲೆಟ್ ಮೂಲಕ ಪ್ರತಿಕ್ರಿಯಿಸಬೇಕು- ಚೆನ್ನಿತ್ತಲ
ಕಾಸರಗೋಡು: ಕಾರ್ಮಿಕರನ್ನು ಮರೆತ ಕೇಂದ್ರ- ರಾಜ್ಯ ಸರಕಾರಗಳ ವಿರುದ್ಧ ಚುನಾವಣೆಯಲ್ಲಿ ಉತ್ತರ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಕಾರ್ಮಿ ಕರು ಹಲವು ವರ್ಷಗಳಿಂದ ಪಡೆದು ಕೊಂಡಿರುವ ಉದ್ಯೋಗ ಸುರಕ್ಷಿತತ್ವ, ಕಾನೂನು ಹಕ್ಕುಗಳನ್ನು ಇಲ್ಲದಂತೆ ಮಾಡಿ ಉದ್ಯೋಗ ಕಾನೂನುಗಳನ್ನೆಲ್ಲ ಕಾರ್ಪರೇಟರ್ಗಳಿಗೆ ಬೇಕಾಗಿ ತಿದ್ದುಪಡಿ ಮಾಡಿದ ಕೇಂದ್ರ ಸರಕಾರ ಹಾಗೂ ಕ್ಷೇಮ ಪಿಂಚಣಿಯನ್ನು ನೀಡದೆ ಸತಾಯಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಕಾರ್ಮಿಕರು ಹಾಗೂ ಅವರ ಕುಟುಂಬ ಬ್ಯಾಲೆಟ್ ಮೂಲಕ ಪ್ರತಿಕ್ರಿಯಿ ಬೇಕೆಂದು ಚೆನ್ನಿತ್ತಲ ನುಡಿದರು.
ಐಕ್ಯರಂಗದ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ರ ಚುನಾವಣಾ ಪ್ರಚಾರಾರ್ಥ ಯುಡಿಎಫ್ ಜಿಲ್ಲಾ ಸಮಿತಿ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆಸಿದ ಕಾರ್ಮಿಕರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಸ್ಟಿಯು ರಾಷ್ಟ್ರೀಯ ಉಪಾಧ್ಯಕ್ಷ ಎ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದರು. ಐಎನ್ಟಿಯುಸಿ ಜಿಲ್ಲಾಧ್ಯಕ್ಷ ಪಿ.ಜಿ. ದೇವ್ ಸ್ವಾಗತಿಸಿದರು.
ನ್ಯಾಯವಾದಿ ಎಂ. ರಹ್ಮತ್ತುಲ್ಲ ಪ್ರಧಾನ ಭಾಷಣ ಮಾಡಿದರು. ಮುಖಂಡರಾದ ಸಿ.ಟಿ. ಅಹಮ್ಮದಾಲಿ, ಕಲ್ಲಟ್ರ ಮಾಹಿನ್ ಹಾಜಿ, ಪಿ.ಕೆ. ಫೈಸಲ್, ಎನ್.ಎ. ನೆಲ್ಲಿಕುನ್ನು ಸಹಿತ ಹಲವರು ಮಾತನಾಡಿದರು.