ಕಾರ್ಮಿಕ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಚೆರ್ಕಳಕ್ಕೆ ಸಮೀಪದ ಬೇರ್ಕದ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಹೋಟೆಲ್ ಕಾರ್ಮಿಕ ಮೂಲತಃ ಮಡಿಕೇರಿ ನಿವಾಸಿ ಖದೀಜಾ ಎಂಬವರ ಪತಿ ಹಸೈನಾರ್ (೫೪) ಎಂಬವರು ನಿನ್ನೆ ರಾತ್ರಿ ಕ್ವಾರ್ಟರ್ಸ್ ಬಳಿಯ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹಸೈನಾರ್ ಅವರು ಮೂಲತಃ ಮಡಿಕೇರಿ ನಿವಾಸಿಯಾಗಿದ್ದಾರೆ. ಕಳೆದ ೩೫ ವರ್ಷಗಳಿಂದ ಅವರು ಬೇರ್ಕದ ಕ್ವಾರ್ಟರ್ಸ್ನಲ್ಲಿ ವಾಸಿಸಿ, ಅಲ್ಲೇ ಪಕ್ಕದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದರು.
ನಿನ್ನೆ ಬೆಳಿಗ್ಗಿನಿಂದ ಅವರು ನಾಪತ್ತೆಯಾಗಿದ್ದರು. ಶಂಕೆಗೊಂಡ ಅವರ ಮನೆಯವರು ಹುಡುಕಾಟ ನಡೆಸಿದಾಗ ನಿನ್ನೆ ರಾತ್ರಿ ಅದೇ ಕ್ವಾರ್ಟರ್ಸ್ ಬಳಿಯ ಬಾವಿಯಲ್ಲಿ ಹಸೈನಾರ್ರ ಮೃತದೇಹ ಪತ್ತೆಯಾಗಿದೆ.