ಕಾಲೇಜು ಚುನಾವಣೆ : ೧೧ ಕಾಲೇಜು ಎಸ್‌ಎಫ್‌ಐಗೆ, ೮ ಕೆಎಸ್‌ಯು ಮೈತ್ರಿ, ೨ ಎಬಿವಿಪಿಗೆ
ಕಾಸರಗೋಡು: ಕಾಲೇಜು ಯೂನಿ ಯನ್ ಚುನಾವಣೆಯಲ್ಲಿ ೧೯ ಕಾಲೇಜು ಗಳಲ್ಲಿ ೧೧ ಕಾಲೇಜುಗಳಲ್ಲೂ ಎಸ್ ಎಫ್‌ಐ ಗೆದ್ದಿದೆ. ೬ ಕಾಲೇಜುಗಳಲ್ಲಿ ಕೆಎಸ್‌ಯು-ಎಂಎಸ್‌ಎಫ್ ಮೈತ್ರಿಕೂಟ ಜಯಗಳಿಸಿದೆ.
ಮುನ್ನಾಡ್ ಪೀಪಲ್ಸ್, ಪೆರಿಯ ಎಸ್.ಎನ್, ಕಾಞಂಗಾಡು ನೆಹರೂ ಎಂಬೆಡೆಗಳಲ್ಲಿ ಸಂಪೂರ್ಣ ಸೀಟ್ ನಲ್ಲೂ ಎಸ್‌ಎಫ್‌ಐ ಜಯಗಳಿಸಿದೆ. ನೆಟ್ಟಣಿಗೆ ಬಜ ಕಾಲೇಜಿನಲ್ಲಿ ೭ ಸೀಟು, ಉದುಮ ಕಾಲೇಜಿನಲ್ಲಿ ೧೫ರಲ್ಲಿ ೧೩ ಎಸ್‌ಎಫ್‌ಐ ಜಯಗಳಿಸಿದೆ. ಎಳೇರಿ ತಟ್ಟ್, ಕರಿಂದಳಂ, ಪಳ್ಳಿಪಾರ ಐಎಚ್ ಆರ್‌ಡಿ, ನೀಲೇಶ್ವರ ಪಿ.ಕೆ. ರಾಜನ್ ಸ್ಮಾರಕ, ಮಡಿಕೈ ಕಾಲಿಚ್ಚಾನಡ್ಕಂದಲ್ಲೂ ಎಸ್‌ಎಫ್‌ಐ ಜಯಗಳಿಸಿದೆ.
ಏಳು ವರ್ಷಗಳ ಬಳಿಕ ರಾಜಪುರಂ ಸೈಂಟ್ ಪಯಸ್ ಕಾಲೇಜು ಕೆಎಸ್‌ಯು ಸಂಪೂರ್ಣ ಸೀಟ್‌ನಲ್ಲಿ ಜಯಗಳಿಸಿದೆ. ವೆಳ್ಳರಿಕುಂಡ್ ಜೂಡ್ ಕಾಲೇಜಿನಲ್ಲೂ ಕೆಎಸ್ ಯು ಜಯಗಳಿಸಿದೆ. ಪೆರಿಯ ಅಂಬೇಡ್ಕರ್ ಕಾಲೇಜು, ಕಾಞಂಗಾಡ್ ಸಿ.ಕೆ. ನಾಯರ್, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಂಎಸ್‌ಎಫ್-ಕೆಎಸ್‌ಯು ಒಕ್ಕೂಟ ಜಯಗಳಿಸಿದೆ. ಪಡನ್ನದಲ್ಲಿ ಎಂಎಸ್‌ಎಫ್ ಜಯಗಳಿಸಿದರೆ ಕುಂಬಳೆ ಐಎಚ್ ಆರ್‌ಡಿ, ಮಂಜೇಶ್ವರ ಗೋವಿಂದ ಪೈ ಕಾಲೇಜು ಎಬಿವಿಪಿ ಪಡೆದಿದೆ.ಜೊತೆಗೆ ರಾಜಪುರಂ ಸೈಂಟ್ ಪಯಾಸ್ ಕಾಲೇಜಿನಲ್ಲಿ ಫಿಸಿಕ್ಸ್ ಅಸೋಸಿ ಯೇಶನ್, ಕಾಸರಗೋಡು ಸರಕಾರಿ ಕಾಲೇಜುನಲ್ಲಿ ಕನ್ನಡ ಅಸೋಸಿ ಯೇಶನ್ ಎಬಿವಿಪಿ ಜಯಗಳಿಸಿದೆ.