ಕಾಲೇಜು ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ

ಮಂಜೇಶ್ವರ: ಕಾಲೇಜು ವಿದ್ಯಾ ರ್ಥಿ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಗ್ಗವನ್ನು ತುಂಡರಿಸಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಕಣ್ವತೀರ್ಥ ಸಮೀಪದ ಕಾಡಬಳಿ ನಿವಾಸಿ ಗಲ್ಪ್ ಉದ್ಯೋಗಿ ನಿರಂಜನ್ ರವರ ಪುತ್ರ ನಿಹಾಲ್ [18] ಮೃತಪಟ್ಟ ದುರ್ದೆÊವಿ. ಈತ ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ವರ್ಷ ಡಿಗ್ರಿ ವಿದ್ಯಾರ್ಥಿಯಾಗಿದ್ದಾನೆ. ಮಂಗಳವಾರ ಸಂಜೆ 4ಗಂಟೆಗೆ ಮನೆಯಲ್ಲಿ ಕೊಠಡಿಯೊಳಗೆ ತೆರಳಿ ಬಾಗಿಲು ಹಾಕಿದ್ದಾನೆ. ಸಂಜೆ 6.30ರ ತನಕ ಹೊರಕ್ಕೆ ಬಂದಿರಲಿಲ್ಲ ಇದರಿಂದ ಗಾಬರಿಗೊಂಡು ತಾಯಿ ಸ್ಥಳೀಯರನ್ನು ಕರೆದು ಬಾಗಿಲನ್ನು ಮುರಿದು ನೋಡಿದಾಗ ಸೀರೆಯಿಂದ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಹಗ್ಗವನ್ನು ತುಂಡರಿಸಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದನು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಉಡುಪಿಯಲ್ಲಿರುವ ಅಜ್ಜಿ ಮನೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಮೃತನು ತಂದೆ, ತಾಯಿ ಲತಾ, ಸಹೋದರ ನಿಖಿಲ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ.

Leave a Reply

Your email address will not be published. Required fields are marked *

You cannot copy content of this page