ಕಾಳಧನ ಬಿಳುಪಿಸುವಿಕೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಬಂಧನ
ಮುಂಬಯಿ: ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಸಿಯನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಬಂಧಿಸಿದೆ. ನಿಷೇಧಿತ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯ (ಪಿಎಫ್‌ಐ)ದೊಂದಿಗೆ ನಂಟು ಹೊಂದಿ ಕಾಳಧನ ವ್ಯವಹಾರ ನಡೆಸಿದ ಸಂಬಂಧ ತನಿಖೆಯ ಅಂಗವಾಗಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಫೈಸಿಯನ್ನು ಬಂಧಿಸಲಾಗಿದೆ. ಕಾಳಧನ ಬಿಳುಪಿಸುವಿಕೆ ವಿರುದ್ಧ ನಿಯಮವನ್ನು ಉಲ್ಲಂಘಿಸಿ ಆರ್ಥಿಕ ವ್ಯವಹಾರ ನಡೆಸಿರುವುದಾಗಿ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ಇ.ಡಿ ಮೂಲಗಳು ತಿಳಿಸಿವೆ.