ಕಾಳುಮೆಣಸು ಬೇರ್ಪಡಿಸುವ ಯಂತ್ರ ಕಂಡು ಹಿಡಿದ ಪಡ್ರೆಯ ಎಸ್. ಗೋಪಾಲಕೃಷ್ಣ ಶರ್ಮರಿಗೆ ರಾಜ್ಯ ಪ್ರಶಸ್ತಿ

ಪೆರ್ಲ: ಹೊಸ ತರದ ಉತ್ತಮ ಕೃಷಿ ಉಪಕರಣವನ್ನು ಕಂಡುಹಿಡಿಯುವ ಮೂಲಕ ರಾಜ್ಯ ಸರಕಾರದ ಪುರಸ್ಕಾರಕ್ಕೆ ಎಣ್ಮಕಜೆ ಪಡ್ರೆ ಸರಯು ಹೌಸ್‌ನ ಎಸ್. ಗೋಪಾಲಕೃಷ್ಣ ಶರ್ಮ ಆಯ್ಕೆಯಾಗಿದ್ದು, ಅವರು ಸಂತೋಷ ಭರಿತರಾಗಿದ್ದಾರೆ.

ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಮಿಕರ ಅಭಾವದಿಂದಾಗಿ ಸಂದಿಗ್ಧತೆ ಎದುರಿಸುವ ಕೃಷಿಕರಿಗೆ ಸಹಾಯ ಮಾಡಬೇಕೆಂಬ ದೀರ್ಘ ಕಾಲದ ಪ್ರಯತ್ನವೇ ಹೊಸ ಯಂತ್ರ ಪತ್ತೆಗೆ ಗೋಪಾಲಕೃಷ್ಣ ಶರ್ಮರಿಗೆ ಹೇತುವಾಗಿರುವುದು. ನಾಲ್ಕು ವರ್ಷದ ಸತತ ಪ್ರಯತ್ನದಿಂದ ಕಾಳುಮೆಣಸು ಬೇರ್ಪಡಿಸುವ ಯಂತ್ರವನ್ನು ೨೦೧೨ರಲ್ಲಿ ಅವರು ಕಂಡುಹಿಡಿದಿದ್ದರು. ಬಳಿಕ ಮೂರು ವರ್ಷಗಳವರೆಗೆ ಅದರ ಚಟುವಟಿಕೆಯಲ್ಲಿನ ಲೋಪವನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ೨೦೧೫ರಲ್ಲಿ ವಿನ್‌ಪೆಟ್ಟ್ ಎಂಬ ಹೆಸರಲ್ಲಿ ಯಂತ್ರವನ್ನು ಮಾರುಕಟ್ಟೆಗೆ ತಂದಿದ್ದಾರೆ. ಇದು ಕಾಳುಮೆಣಸು ಕೃಷಿಕರಿಗೆ ದೊಡ್ಡ ಅನುಗ್ರಹವಾಯಿತು.

ಒಂದು ಕಾಳುಮೆಣಸು ಕೂಡಾ ಹಾಳಾಗದಂತೆ ಕಾಳುಮೆಣಸನ್ನು ಬೇರ್ಪಡಿಸುವ, ಗುಣಮಟ್ಟವನ್ನು ಖಚಿತಪಡಿಸುವ ಯಂತ್ರದ ಪತ್ತೆಗೆ ೨೦೨೦ರಲ್ಲಿ, ೨೦೨೧ರಲ್ಲಿ ಇಂಡ್ಯನ್ ಕೃಷಿ ಸಂಶೋಧನೆ ಕೌನ್ಸಿಲ್ ಪ್ರಶಸ್ತಿ ನೀಡಿ ಅಭಿನಂದಿಸಿದೆ. ಹೈದರಾಬಾ ದ್‌ನ ನೇಶನಲ್ ಅಗ್ರಿಕಲ್ಚರಲ್ ರಿಸರ್ವ್ ಕೇಂದ್ರ ೨೦೨೧ರಲ್ಲೂ, ೨೦೨೨ರಲ್ಲೂ ಗೋಪಾಲಕೃಷ್ಣ ಶರ್ಮರನ್ನು ರಾಷ್ಟ್ರೀಯ ಪ್ರಶಸ್ತಿ ನೀಡಿ ಅಭಿನಂದಿಸಿದೆ. ಕೃಷಿ ಅಗತ್ಯಕ್ಕಿರುವ ಇತರ ಸಣ್ಣ ರೀತಿಯ ಕಂಡು ಹಿಡಿತವನ್ನು ಅವರು ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page