ಕಾವುಗೋಳಿ ಕ್ಷೇತ್ರ ಕಾಣಿಕೆ ಹುಂಡಿಯಿಂದ ಹಣ ಕಳವು

ಕಾಸರಗೋಡು: ಕೂಡ್ಲು ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಹುಂಡಿಯನ್ನು ಒಡೆದು ಸುಮಾರು ೧೫,೦೦೦ ರೂ. ಕಳವುಗೈದಿದ್ದಾರೆ. ಈ ತಿಂಗಳ ೭ರಂದ ರಾತ್ರಿ ೮ರಂದು ಬೆಳಿಗ್ಗೆ ೬ ಗಂಟೆಯೊಳಗೆ  ಕಳವು ನಡೆದಿದೆ. ಈ ಬಗ್ಗೆ ಶ್ರೀ ಕ್ಷೇತ್ರದ ಪರವಾಗಿ ಶ್ರೀನಿವಾಸ ಕೆ ಅವರು ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೆರಳಚ್ಚುಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮಾತ್ರವಲ್ಲ ಕಳ್ಳರನ್ನು ಗುರುತುಹಚ್ಚಲು ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page