ಕಾಸರಗೋಡಿನಲ್ಲಿ ಮತ್ತೆ ಗೆದ್ದು ಬೀಗಿದ ಉಣ್ಣಿತ್ತಾನ್

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್ (ಕಾಂಗ್ರೆಸ್)ನಲ್ಲಿ ಹಾಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಮತ್ತೆ ಗೆದ್ದು ಬೀಗಿದ್ದಾರೆ.
ಉಣ್ಣಿತ್ತಾನ್ರಿಗೆ 4,90,650 ಮತಗಳು ಲಭಿಸಿದರೆ, ಎಡರಂಗ (ಸಿಪಿಎಂ)ದ ಎಂ.ವಿ. ಬಾಲಕೃಷ್ಣನ್ ಮಾಸ್ತರ್ರಿಗೆ 3,90,010, ಎನ್ಡಿಎ (ಬಿಜೆಪಿ)ಯ ಎಂ.ಎಲ್. ಅಶ್ವಿನಿಯವರಿಗೆ 2,19,558 ಮತಗಳು ಲಭಿಸಿವೆ.
ಇದರಲ್ಲಿ ರಾಜ್ಮೋಹನ್ ಉಣ್ಣಿತ್ತಾನ್ 1,00,649 ಮತಗಳ ಭಾರೀ ಅಂತರದಿAದ ಗೆದ್ದಿದ್ದಾರೆ. 2019ರಲ್ಲಿ ಉಣ್ಣಿತ್ತಾನ್ 40,438 ಮತಗಳ ಅಂತರದಲ್ಲಿ ಗೆದ್ದು ಕೊಂಡಿದ್ದರು. ಅದಕ್ಕಿಂತಲೂ ಇಮ್ಮಡಿ ಬಹುಮತದೊಂದಿಗೆ ಅವರು ಈ ಬಾರಿ ಮತ್ತೆ ಗೆದ್ದು ಲೋಕಸಭೆಗೆ ಆಯ್ಕೆಗೊಂಡಿದ್ದಾರೆ.
ಈ ಬಾರಿ ಸ್ಪರ್ಧಿಸಿದ ಇತರ ಉಮೇದ್ವಾರರಾದ ಸುಕುಮಾರಿ ಎಂ (ಬಹುಜನ ಸಮಾಜವಾದಿ ಪಾರ್ಟಿ) 1,612, ಪಕ್ಷೇತರರಾದ ಅನೀಶ್ ಪಯ್ಯನ್ನೂರು-759, ಮನೋ ಹರನ್-759, ರಾಜೇಶರ-897, ಮನೋಹರನ್ ಕೆ-804, ಬಾಲಕೃಷ್ಣನ್ ಎನ್-628, ಎನ್. ಕೇಶವ ನಾಯ್ಕ-507 ಮತ್ತು ನೋಟಕ್ಕೆ 7112 ಮತಗಳು ಲಭಿಸಿದೆ.
ಎನ್ಡಿಎ ಮತಗಳಿಕೆಯಲ್ಲಿ 43,599ರಷ್ಟು ಹೆಚ್ಚಳ
ಎಡರಂಗದ ಮತಗಳಿಗೆ ಕುಸಿತ
ಕಾಸರಗೋಡು: ಈ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ (ಬಿಜೆಪಿ)ಗೆ ಮತಗಳಿಕೆಯಲ್ಲಿ 2019ರಲ್ಲಿ ಲಭಿಸಿದ್ದುದ ಕ್ಕಿಂತಲೂ 43,599 ಹೆಚ್ಚು ಮತ ಲಭಿಸಿದೆ. ಇನ್ನು ಯುಡಿಎಫ್ಗೆ ಕಳೆದ ಬಾರಿಗಿಂತಲೂ 15,950ರಷ್ಟು ಅಧಿಕ ಮತಗಳು ಲಭಿಸಿದೆ. ಆದರೆ ಇದೇ ಸಂದರ್ಭದಲ್ಲಿ ಎಡರಂಗಕ್ಕೆ ಕಳೆದ ಬಾರಿಗಿಂತಲೂ ಈ ಸಲ ಮತಗಳಿಕೆಯಲ್ಲಿ 83,779ರಷ್ಟು ಮತ ಕುಸಿತ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page