ಕಾಸರಗೋಡಿನ ಅಭಿವೃದ್ಧಿಗಾಗಿ ಎಂ.ಎಲ್. ಅಶ್ವಿನಿ ಗೆಲುವು ಅನಿವಾರ್ಯ- ಕುಮ್ಮನಂ

ಕಾಸರಗೋಡು:  ಕಾಸರಗೋಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರರಾಗಿ ಸ್ಪರ್ಧಿಸುತ್ತಿರುವ ಬಿಜೆಪಿಯ ಎಂ.ಎಲ್. ಅಶ್ವಿನಿಯವ ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕುಮ್ಮನಂ ರಾಜಶೇಖರ್ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಸರಕಾರ ಕೇರಳದ ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗಾಗಿ ಜ್ಯಾರಿಗೊಳಿಸುತ್ತಿರುವ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಜನರಿಗೆ ಲಭಿಸುವಂತೆ ಮಾಡಲು ಅಶ್ವಿನಿಯವರ ಗೆಲುವು ಅನಿವಾರ್ಯವಾಗಿದೆ ಎಂದೂ ಅವರು ಹೇಳಿದ್ದಾರೆ. ಕಾಸರಗೋಡು ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಿನ್ನೆ ನಡೆದ ಅಭಿಭಾಷಕ ಪರಿಷತ್‌ನ ಸಮ್ಮೇಳನವನ್ನು ಉದ್ಘಾಟಿಸಿ ಕುಮ್ಮನಂ ಮಾತನಾಡುತ್ತಿದ್ದರು.

ಅಚಲ ತೀರ್ಮಾನವನ್ನು ಕೈಗೊಳ್ಳಲು ಹಾಗೂ ಅವುಗಳನ್ನು ಜ್ಯಾರಿಗೊಳಿಸಲು ನರೇಂದ್ರ ಮೋದಿ ಸರಕಾರ ತೋರುತ್ತಿರುವ ಕಟಿಬದ್ದತೆಯು ಇಡೀ ವಿಶ್ವದಲ್ಲೇ ಭಾರತವನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದೆ. ಈ ಲೋಕಸಭಾ ಚುನಾವಣೆಯಲ್ಲಿ ೪೦೦ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರ ಲಿದೆ ಎಂಬುವುದು ಸುನಿಶ್ಚಿತ ಎಂದೂ ಅವರು ಹೇಳಿದರು. ೧೦,೦೦೦ದಷ್ಟು ಗಣ್ಯರನ್ನು ಸಂದರ್ಶಿಸುವ ತೀರ್ಮಾನ ವನ್ನು ನ್ಯಾಯವಾದಿಗಳ ಈ ಸಮ್ಮೇಳನ ತೀರ್ಮಾನಿಸಿದೆ. ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಗಳಾದ ಬಿ. ರವೀಂದ್ರನ್ ಮತ್ತು ಪಿ. ಮನೋಜ್ ಮಾತನಾಡಿದರು. ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಸ್ವಾಗತಿಸಿ, ನ್ಯಾಯವಾದಿ ಅನಿಲ್ ಕೆ.ಜಿ. ವಂದಿಸಿದರು.

ಇದರ ಹೊರತಾಗಿ ಕುಟ್ಟಿಕ್ಕೋ ಲ್‌ನ ಪಾಲಾರ್ ಮತ್ತು ಕರಿವೇಡಗಂನ ಕೋಳದಲ್ಲಿ ನಡೆದ ಎನ್‌ಡಿಎ ಕುಟುಂಬ ಸಂಗಮ ಕಾರ್ಯಕ್ರಮದಲ್ಲೂ ಕುಮ್ಮನಂ ಭಾಗವಹಿಸಿ ಮಾತನಾಡಿದರು. ಅನಂತರ ಸಂಜೆ ಚಿತ್ತಾರಿ ಕಡಪ್ಪುರದಲ್ಲಿ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲೂ ಅವರು ಭಾಗವಹಿಸಿ ಮಾತನಾಡಿದರು.ನಾಲ್ಕೂವರೆ ಲಕ್ಷ ಕೋಟಿ ರೂ.ಗಳ ಸಾಲದಲ್ಲಿ ಸಿಲುಕಿ ಒದ್ದಾಡುತ್ತಿರುವ ಕೇರಳವನ್ನು  ರಕ್ಷಿಸಲು ಮೋದಿ ಸರಕಾರದಿಂದ ಸಾಧ್ಯವಾಗಿದೆ. ಕೇರಳದಿಂದ ಎರಡು ಬೋಗಿಗಳಲ್ಲಾಗಿ ಪ್ರತ್ಯೇಕ ಪ್ರತ್ಯೇಕವಾಗಿ ದಿಲ್ಲಿಗೆ ಪ್ರಯಾಣಿಸುತ್ತಿರುವ ಎಡರಂಗ ಮತ್ತು ಐಕ್ಯರಂಗ ನೇತಾರರು ದಿಲ್ಲಿ ತಲುಪಿದ ಬಳಿಕ ಒಂದೇ ಒಕ್ಕೂಟವಾಗಿ ಕಾರ್ಯವೆಸಗುತ್ತಿದ್ದಾರೆ. ಇದು ಕೇರಳದ  ಜನತೆಯನ್ನು ವಂಚಿಸುವ ರೀತಿಯಾಗಿದೆ. ದೇಶದ ಇತರ ರಾಜ್ಯದಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಅಭಿವೃದ್ಧಿಗಾಗಿ ಪ್ರಧಾನಿಯವರನ್ನು ಸಮೀಪಿಸುತ್ತಿದ್ದರೆ, ಅದಕ್ಕೆ ಭಿನ್ನವಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಸಾಲ ಪಡೆಯಲೆಂದೇ ಪ್ರದಾನಿಯವರನ್ನು ಸಂದರ್ಶಿಸುತ್ತಿದ್ದಾ ರೆಂದು ಕುಮ್ಮನಂ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page