ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ೧೧೧ನೇ ಸ್ಥಾಪಕ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ೧೧೧ನೇ ಸ್ಥಾಪಕ ದಿನಾಚರಣೆಯನ್ನು ಆರ್‌ಎಸ್‌ಎಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಕಾರ್ಯನಿರತ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಬ್ಯಾಂಕ್ ಚಯರ್ ಮ್ಯಾನ್ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಯಾಂಕ್ ಸ್ಟಾಫ್ ಯೂನಿಯನ್ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀ ಧರನ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಬ್ಯಾಂಕ್ ಸ್ಟಾಫ್ ಸದಸ್ಯರು, ಅಪ್ರೈಸರ್‌ಗಳು ದೈನಂದಿನ ಠೇವಣಿ ಸಂಗ್ರಹಗಾರರು ಭಾಗವಹಿಸಿದರು. ಉಪಾಧ್ಯಕ್ಷ ಮಾಧವ ಹೇರಳ ಸ್ವಾಗತಿಸಿ, ಬ್ಯಾಂಕ್ ಎಜಿಎಂಸಿ ಉಣ್ಣಿಕೃಷ್ಣನ್ ವಂದಿಸಿದರು.

RELATED NEWS

You cannot copy contents of this page