ಕಾಸರಗೋಡು ಜಿಲ್ಲೆಗೆ ಅಯೋಧ್ಯೆಯ ಮಂತ್ರಾಕ್ಷತೆ

ಬದಿಯಡ್ಕ: ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಪೂಜಿಸಲ್ಪಟ್ಟ ಪವಿತ್ರ ಮಂತ್ರಾಕ್ಷತೆ ಎಡನೀರು ಮಠಕ್ಕೆ ಆಗಮಿಸಿದ ಸಂದರ್ಭ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಶೀರ್ವಾದ ಗಳೊಂದಿಗೆ ಸ್ವೀಕರಿಸಲಾಯಿತು. ಆರ್‌ಎಸ್‌ಎಸ್ ಮುಖಂಡರಾದ ಲೋಕೇಶ್ ಜೋಡುಕಲ್ಲು , ಪುರುಷೋತ್ತಮ ಪ್ರತಾಪನಗರ, ಸುನಿಲ್ ಕುದ್ರೆಪ್ಪಾಡಿ, ವಿಶ್ವಹಿಂದೂ ಪರಿಷತ್ ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ಯಾದವ ಕೀರ್ತೇಶ್ವರ, ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಹರೀಶ್ ಸ್ಕಂದ, ರಂಜಿತ್ ಚೆಟ್ಟಿಯಾರ್, ಶ್ರೀಮಠದ ಭಕ್ತರು, ಹಿಂದೂ ಬಾಂಧವರು ಈ ಸಂದರ್ಭ ಹಾಜರಿದ್ದರು. ಜನವರಿ ೧ರಿಂದ ೧೫ರ ತಾರೀಕಿನ ವೇಳೆ ಪವಿತ್ರ ಮಂತ್ರಾಕ್ಷತೆ ಹಾಗೂ ಕರಪತ್ರ ಜಿಲ್ಲೆಯ ಪ್ರತೀ ಮನೆಗಳಿಗೆ ತಲುಪಲಿದೆ. ಸಂಘಪರಿವಾರದ ನೇತೃತ್ವದಲ್ಲಿ ಈ ಮಹಾಭಿಯಾನ ನಡೆಯಲಿದೆ. ಜನವರಿ ೨೨ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ, ಬ್ರಹ್ಮಕಲಶ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page