ಕಾಸರಗೋಡು- ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಮಂಗಳೂರಿಗೆ ವಿಸ್ತರಣೆ

ಕಾಸರಗೋಡು: ಕಾಸರಗೋಡು- ತಿರುವನಂತಪುರ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಈಗ ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ.

ಇದರಂತೆ ಈ ರೈಲು ಮಂಗಳೂರಿನಿಂದ ಬೆಳಿಗ್ಗೆ ೬.೧೫ಕ್ಕೆ ಹೊರಟು ಅಪರಾಹ್ನ ೩.೦೫ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ ೪.೦೫ಕ್ಕೆ ಹೊರಟು ರಾತ್ರಿ ೧೨.೪೦ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ಆರು ದಿನಗಳಲ್ಲೂ ಈ ರೈಲು ಸೇವೆ ನಡೆಸಲಿದೆ.

ವಂದೇಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಿದ ಅಧಿಕೃತ ತೀರ್ಮಾ ನವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿದ್ಯುಕ್ತವಾಗಿ ಪ್ರಕಟಿಸಿದ್ದಾರೆ.

ಈ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಲು ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವರು ಕೇಂದ್ರ ರೈಲ್ವೇ ಸಚಿವರೂ ವಿನಂತಿಸಿಕೊಂಡಿದ್ದರು. ಕೊನೆಗೆ ಅದಕ್ಕೆ ಪೂರಕ ತೀರ್ಮಾನವನ್ನು ರೈಲ್ವೇ ಸಚಿವರು ಕೈಗೊಂಡಿದ್ದಾರೆ.

ಆದರೆ ಹೀಗೆ ವಿಸ್ತರಿಸಲ್ಪಟ್ಟ ಈ ರೈಲು ಸೇವೆ ಮಂಗಳೂರಿನಿಂದ ಸೇವೆ ಆರಂಭಿಸುವ ಎಂಬ ದಿನಾಂಕವನ್ನು ಈ ತನಕ  ಪ್ರಕಟಿಸಲಾಗಿಲ್ಲ. ಅದು ಒಂದೆರಡು ದಿನಗಳಲ್ಲಿ ಉಂಟಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page