ಕಾಸರಗೋಡು ನಗರಸಭಾ ಅಧ್ಯಕ್ಷ ಚುನಾವಣೆ ನಾಳೆ: ಅಬ್ಬಾಸ್ ಬೀಗಂ ಮುಸ್ಲಿಂ ಲೀಗ್ ಉಮೇದ್ವಾರ
ಕಾಸರಗೋಡು: ಕಾಸರಗೋಡು ನಗರಸಾ ಅಧ್ಯಕ್ಷರ ಆಯ್ಕೆಗಾಗಿರುವ ಚುನಾವಣೆ ನಾಳೆ ನಡೆಯಲಿದೆ. ಚೇರಂಗೈ ಈಸ್ಟ್ ವಾರ್ಡ್ನ ಮುಸ್ಲಿಂ ಲೀಗ್ ಕೌನ್ಸಿಲರ್ ಅಬ್ಬಾಸ್ ಬೀಗಂರನ್ನು ಉಮೇದ್ವಾರರನ್ನಾಗಿ ಕಣಕ್ಕಿಳಿಸಲು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಅಬ್ಬಾಸ್ ಬೀಗಂ ಈಗ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ನಗರಸಭಾ ಅಧ್ಯಕ್ಷರಾಗಿ ಕಳೆದ ಎರಡೂವರೆ ವರ್ಷ ಪೂರೈಸಿದ ತಳಂಗರೆ ಖಾಸಿಲೆನ್ನ ಮುಸ್ಲಿಂ ಲೀಗ್ ಕೌನ್ಸಿಲರ್ ನ್ಯಾ. ವಿ.ಎಂ. ಮುನೀರ್ ಅವರು ಆ ಸ್ಥಾನಕ್ಕೆ ಮಾತ್ರವಲ್ಲ ತಮ್ಮ ಕೌನ್ಸಿಲರ್ ಸ್ಥಾನಕ್ಕೂ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ ತೆರವುಗೊಂಡ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಆದರೆ ಬಿಜೆಪಿಯ ಉಮೇದ್ವಾರರನ್ನು ಇನ್ನಷ್ಟೇ ತೀರ್ಮಾನಿಸಲು ಬಾಕಿಯಿದೆ. ನಗರಸಭೆಯಲ್ಲಿ ಮುಸ್ಲಿಂ ಲೀಗ್ ಸ್ಪಷ್ಟ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಅಬ್ಬಾಸ್ ಬೀಗಂ ಹೊಸ ಅಧ್ಯಕ್ಷರಾಗಿ ಆಯ್ಕೆಗೊಳ್ಳುವುದು ಖಚಿತವಾಗಿದೆ.