ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಎಡನೀರು ಮಠಕ್ಕೆ ಹೊರೆಕಾಣಿಕೆ ಸಮರ್ಪಣೆ
ಕಾಸರಗೋಡು: ಎಡನೀರು ಸಂಸ್ಥಾನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದಿಂದ ಹೊರಟು ಶ್ರೀಮಠಕ್ಕೆ ಸಮರ್ಪಿಸಲಾಯಿತು. ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಶ್ರೀ ವೆಂಕಟರಮಣ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ಜರಗಿತು. ಹೊರೆಕಾಣಿಕೆಯ ನೇತೃತ್ವವನ್ನು ವಲಯ ಸಮಿತಿಯ ಪದಾಧಿಕಾರಿಗಳಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕೆ.ಎನ್. ವೆಂಕಟ್ರಮಣ ಹೊಳ್ಳ, ರಾಮ್ ಪ್ರಸಾದ್, ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ, ವಾವನ್ ರಾವ್ ಬೇಕಲ್, ಪ್ರದೀಪ್ ಬೇಕಲ್, ಕೆ.ಎನ್.ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ರವಿ ಕೇಸರಿ ವಹಿಸಿದರು. ಶ್ರೀ ಮಠದ ಶಿಷ್ಯರು ಉಪಸ್ಥಿತರಿದ್ದರು.