ಕಾಸರಗೋಡು ಸೇರಿ ಆರು ಜಿಲ್ಲೆಗಳಲ್ಲಿ ಸೆ. 144ರ ಪ್ರಕಾರ ನಿಷೇಧಾಜ್ಞೆ ಜ್ಯಾರಿ
ಕಾಸರಗೋಡು: ಲೋಕಸಭೆಗೆ ನಾಳೆ ಚುನಾವಣೆ ನಡೆಯಲಿರು ವಂತೆಯೇ ಕಾಸರಗೋಡು, ಕಣ್ಣೂರು, ಮಲಪ್ಪುರಂ, ತೃಶೂರು, ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ನಿನ್ನೆ ಸಂಜೆ 6 ಗಂಟೆಯಿಂದ ಸಿಆರ್ಪಿಸಿ ಸೆಕ್ಷನ್ 144ರನ್ವಯ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ. ಈ ನಿಷೇಧಾಜ್ಞೆ ಎಪ್ರಿಲ್ 27ರಂದು ಬೆಳಿಗ್ಗೆ 6ಗಂಟೆಯ ತನಕ ಮುಂದುವರಿಯಲಿದೆ. ಕಾಸರಗೋಡು ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ ರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಿಷೇಧಾಜ್ಞೆ ಜ್ಯಾರಿಗೊಂಡಿರುವ ಹಿನ್ನೆಲೆಯಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಆದರೆ ಅತ್ಯಗತ್ಯ ಸೇವೆಗಳನ್ನು ನಿಷೇಧಾಜ್ಞೆ ಯಿಂದ ಹೊರತುಪಡಿಸಲಾಗಿದೆ.