ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಬಳಿಕ ನ್ಯುಮೋನಿಯಾ ಬಾಧಿಸಿ ಅಧ್ಯಾಪಕ ಮೃತ್ಯು
ಬದಿಯಡ್ಕ: ಪೆರಡಾಲ ನವಜೀ ವನ ಹೈಯರ್ ಸೆಕೆಂಡರಿ ಶಾಲೆಯ ಇಂಗ್ಲಿಷ್ ಅಧ್ಯಾಪಕ ಪಿಲಾತ್ತರ ನಿವಾಸಿ ಸತ್ಯದಾಸನ್ (54) ಅಸೌಖ್ಯ ಬಾಧಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಸತ್ಯದಾಸನ್ ಕಳೆದೆರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇದರಿಂದ ಕಳೆದ ಡಿಸೆಂಬರ್ 20ರಂದು ಎರ್ನಾ ಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಇವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸ ಲಾಗಿತ್ತು. ಅನಂತರ ವಿಶ್ರಾಂತಿಯಲ್ಲಿದ್ದ ಇವರಿಗೆ ಎರಡು ದಿನಗಳ ಹಿಂದೆ ನ್ಯುಮೋನಿ ಯಾ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಇಂದಿರ, ಪುತ್ರ ಸಾರಂಗ್, ಸಹೋದರ-ಸಹೋದರಿ ಯರಾದ ಮಧುಸೂದನನ್, ರಾಮಚಂದ್ರನ್, ನಾರಾಯಣನ್, ನಂದಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.