ಕಿದೂರು ಶ್ರೀ ದುರ್ಗಾಪರಮೇಶ್ವರೀ ಮಠದಲ್ಲಿ ನವರಾತ್ರಿ ಉತ್ಸವ ೧೯ರಂದು
ಕುಂಬಳೆ: ಕಿದೂರು ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮಠದಲ್ಲಿ ನವರಾತ್ರಿ ಉತ್ಸವ ಈ ತಿಂಗಳ 19ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 8ರಿಂದ ಗಣಹೋಮ, 8.30ಕ್ಕೆ ಶ್ರೀ ದೇವರಿಗೆ ನವಕಾಭಿಷೇಕ, 9.30ಕ್ಕೆ ಚಂಡಿಕಾ ಹೋಮ, 11.30ಕ್ಕೆ ಚಂಡಿಕಾ ಹವನದ ಪೂರ್ಣಾಹುತಿ, ಮಧ್ಯಾಹ್ನ ಉಪ್ಪಳ ಕೆ.ಎನ್.ಎಚ್ ಆಸ್ಪತ್ರೆಯ ಡಾ. ಪ್ರಭಾಕರ ಹೊಳ್ಳ ರವರಿಗೆ ಸನ್ಮಾನ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1.30ಕ್ಕೆ ವಿಷ್ಣು ಬಳಗ ಮಜಿಬೈಲು ಇವರಿಂದ ‘ಕದಂಬ ಕೌಶಿಕ್’ ಕಥಾಭಾಗದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ವಿವಿಧ ತಂಡದಿAದ ಭಜನೆ, ಸಂಜೆ 6.30ಕ್ಕೆ ದೀಪಾರಾಧನೆ, 6.45ಕ್ಕೆ ಕುಣಿತ ಭಜನೆ, ರಾತ್ರಿ 8ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.