ಕಿಳಿಂಗಾರು ಸಾಯಿರಾಂ ಭಟ್ ಕುಟುಂಬದಿಂದ ಬಡಜನತೆಗೆ ಸಹಾಯ ಹಸ್ತ

ಬದಿಯಡ್ಕ: ಪ್ರತಿಯೊಬ್ಬರೂ ತಮ್ಮ ಸ್ವಂತಕಾಲಿನಲ್ಲಿ ನಿಂತಾಗ ಅವರು ಆ ಕುಟುಂಬಕ್ಕೆ ಅಸರೆಯಾಗುತ್ತಾರೆ. ಸ್ವ ಉದ್ಯೋಗಕ್ಕೆ ಉತ್ತೇಜನವನ್ನು ಕೊಡುವ ನಿಟ್ಟಿನಲ್ಲಿ ನಮ್ಮ ಸೇವಾಕಾರ್ಯಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಹೇಳಿದರು. ಕಿಳಿಂಗಾರು ಸಾಯಿನಿವಾಸದಲ್ಲಿ ನಿನ್ನೆ ಜರಗಿದ ಸರಳ ಸಮಾರಂಭದಲ್ಲಿ ಅವರು ಬಡಜನತೆಗೆ ತಮ್ಮ ಕುಟುಂಬದ ನೆರವನ್ನು ನೀಡಿ ಮಾತನಾಡಿದರು. ತನ್ನ ಬಡತನವನ್ನು ನೀಗಿಸಿ ಕುಟುಂಬವನ್ನು ಸಾಕಿಸಲಹಲು ನೆರವಾಗುವ ನಿಟ್ಟಿನಲ್ಲಿ ಹೊಲಿಗೆಯಂತ್ರಗಳನ್ನು ಹಾಗೂ ಚಿಕಿತ್ಸೆಗೆ ನೆರವನ್ನು ನೀಡುತ್ತಿದ್ದೇವೆ ಎಂದರು. ಶಾರದಾ ಗೋಪಾಲಕೃಷ್ಣ ಭಟ್ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಶೀಲಾ ಕೆ.ಎನ್.ಭಟ್, ವೇಣುಗೋಪಾಲ್ ಜೊತೆಗಿದ್ದರು. ಫಲಾನುಭವಿಗಳಾದ ಜಯಲಕ್ಷಿö್ಮÃ ಏಣಿಯರ್ಪು, ಚಂದ್ರಾವತಿ ರೈ ಪೆರ್ಮುದೆ, ಆಯಿಶತ್ ರಶೀದಾ ಮುಗುರೋಡ್, ರಮ್ಯಾ ಮುಳ್ಳೇರಿಯ, ಆಶಾ ಕುಮಾರಮಂಗಲ ಅವರಿಗೆ ಹೊಲಿಗೆ ಯಂತ್ರಗಳ ಚೆಕ್ ಹಾಗೂ ತ್ಯಾಂಪಣ್ಣ ರೈ ಕಿಳಿಂಗಾರು ಅವರಿಗೆ ಚಿಕಿತ್ಸೆಗೆ ಸಹಾಯಧನ, ಸುಂದರಿ ಬಂಬ್ರಾಣ ಅವರಿಗೆ ವಿವಾಹ ಸಹಾಯಧನವನ್ನು ನೀಡಲಾಯಿತು.

Leave a Reply

Your email address will not be published. Required fields are marked *

You cannot copy content of this page