ಕೀಯೂರು ಕ್ಷೇತ್ರ ಮುಖ್ಯ ಅರ್ಚಕ ನಿಧನ
ಕಾಸರಗೋಡು: ಚಂದ್ರಗಿರಿ ಕೀಯೂರು ಶ್ರೀ ಧರ್ಮಶಾಸ್ತಾ ಕ್ಷೇತ್ರದ ಮುಖ್ಯ ಅರ್ಚಕ ಸಿ.ಎಚ್. ಜಯಪ್ರಸಾದ್ (೬೦) ಹೃದಯಾ ಘಾತದಿಂದ ನಿಧನಹೊಂದಿದರು. ಕ್ಷೇತ್ರ ಪರಿಸರದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ನಿಧನ ಸಂಭವಿಸಿದೆ. ಚಂದ್ರಗಿರಿ ಕ್ಷೇತ್ರದ ಮಾಜಿ ಮುಖ್ಯ ಅರ್ಚಕ ಸಿ.ಎಚ್. ವಾಸುದೇವ ಅಡಿಗ-ದಿ| ಕಲ್ಯಾಣಿಯಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಹೇಮಲತಾ, ಮಕ್ಕಳಾದ ಅನುಪ್ರಿಯ(ಎನ್.ಜಿ.ಒ ಕಂಪೆನಿ ಚೆನ್ನೈ), ಸಿ.ಎಚ್. ಅಭಿನಯ (ಬೆಂಗಳೂರಿನಲ್ಲಿ ವಿದ್ಯಾರ್ಥಿ), ಸಹೋದರ-ಸಹೋದರಿಯ ರಾದ ರಾಜೇಶ್ (ಗಲ್ಫ್), ಶೋಭನ (ಪೈವಳಿಕೆ), ಸುಮನ (ಪುತ್ತಿಗೆ), ಸುನಿತ (ತಚ್ಚಂಗಾಡ್), ಸುರೇಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.