ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ನಿನ್ನೆ ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಗಣಪತಿ ಹೋಮ ಸಹಿತ ವಿವಿಧ ಹೋಮಗಳು ಋತ್ವಿಜರ ಆಗಮನ, ಪೂರ್ಣಕುಂಭ ಸ್ವಾಗತ, ಮಹಾಪೂಜೆ, ಅಂಕುರ ಪೂಜೆ, ಅನ್ನಸಂತರ್ಪಣೆ ಜರಗಿತು. ವಾಸ್ತುಪೂಜೆ, ವಾಸ್ತುಬಲಿ, ರಾತ್ರಿ ಅನ್ನ ಸಂತರ್ಪಣೆ ಜರಗಿತು.