ಕುಂಕುಮ ಕೇಸರಿ ವಶ: ಪರವನಡ್ಕ ನಿವಾಸಿ ಸೆರೆ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಅಲ್ಲಿನ ಏರ್ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚ gಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೨ ಕಿಲೋ ಕುಂಕುಮ ಕೇಸರಿಯನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕಳನಾಡು ಪರವನಡ್ಕ ನಿವಾಸಿ ಅಹಮ್ಮದ್ ಸಾಬೀರ್ (೩೭) ಎಂಬಾತನನ್ನು ಸೆರೆಹಿಡಿದು ಬಳಿಕ ಮಾಲು ಸಹಿತ ಆತನನ್ನು ಕಸ್ಟಮ್ಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಅಹಮ್ಮದ್ ಸಾಬೀರ್ ದುಬಾಯಿಯಿಂದ ವಿಮಾನದಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿ ಕಸ್ಟಮ್ಸ್ ತಪಾಸಣೆಗೊಳಗಾಗಿ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದನು. ಆಗ ಆತನನ್ನು ಕಂಡು ಶಂಕೆಗೊಂಡ ಏರ್ಪೋರ್ಟ್ ಪೊಲೀಸರು ಆತನ ಬ್ಯಾಗ್ ತಪಾಸಣೆಗೊಳಪಡಿಸಿದ್ದರು. ಆಗ ಅದರಲ್ಲಿ ಕುಂಕುಮ ಕೇಸರಿ ಪತ್ತೆಯಾ ಯಿತೆಂದು ಪೊಲೀಸರು ತಿಳಿಸಿದ್ದಾರೆ.