ಕುಂಟಿಕಾನ ಶಾಲೆಯಲ್ಲಿ ‘ಬಡ್ಡಿಂಗ್ ರೈಟರ್ಸ್’ಗೆ ಚಾಲನೆ

ಬದಿಯಡ್ಕ: ಸಾಹಿತ್ಯವೆಂಬ ಕೃಷಿಯಲ್ಲಿ ಅನೇಕ ಪ್ರಾಕಾರಗಳಿವೆ. ನಮ್ಮ ಆಯ್ಕೆಗೆ ಹೊಂದಿಕೊAಡು ಕಥೆ, ಕವನ, ಸಾಹಿತ್ಯಗಳು ರೂಪುಗೊಳ್ಳುತ್ತವೆ. ಬಾಲ್ಯದಲ್ಲಿಯೇ ಸದಾ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂ ಡಾಗ ನಮ್ಮೊಳಗಿರುವ ಸಾಹಿತ್ಯದ ಬೀಜ ಮೊಳಕೆಯೊಡೆಯುತ್ತದೆ. ಪುಸ್ತಕವು ಮಸ್ತಕದ ವಿಕಾಸಕ್ಕೆ ಪೂರಕವಾಗಿದೆ ಎಂದು ಧನ್ಯಶ್ರೀ ಸರಳಿ ಅಭಿಪ್ರಾಯಪಟ್ಟರು.
ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಜರಗಿದ `ಬಡ್ಡಿಂಗ್ ರೈರ‍್ಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ನಾವು ಮನಗಂಡು ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮುಂದುವರಿಸಿಕೊAಡು ಹೋದಾಗ ಆ ವಿದ್ಯಾರ್ಥಿಯ ಜ್ಞಾನವು ವಿಕಾಸವನ್ನು ಹೊಂದುತ್ತದೆ ಎಂದರು. ಮುಖ್ಯೋಪಾಧ್ಯಾಯ ವೆಂಕಟ್ರಾಜ ವಾಶೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಡ್ಡಿಂಗ್ ರೈರ‍್ಸ್ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಾಪಿಕೆ ಅಖಿಲಾ ಲಕ್ಷಿö್ಮÃ, ವಿದ್ಯಾರ್ಥಿಗಳಾದ ಮಾಳವಿಕಾ ರಮೇಶ್, ಹಿತೈಶಿ, ಅನಾಮಿಕಾ ಆಂಟನಿ, ಶರಣ್ಯ ಕೆ. ಸ್ವರಚಿತ ಕವನವಾಚಿಸಿದರು. ಹಿರಿಯ ಅಧ್ಯಾಪಕ ಉಣ್ಣಿಕೃಷ್ಣನ್ ಟಿ.ಒ., ಸ್ಟಾಫ್ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬಿ ಮಾತನಾಡಿದರು. ವಿದ್ಯಾರಂಗದ ಸಂಚಾಲಕ ಪ್ರದೀಪ್ ಕುಮಾರ್ ಬಿ ಸ್ವಾಗತಿಸಿ, ಶಾಂತಿಪ್ರಿಯಾ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page