ಕುಂಬಳೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ನಾಗರಿಕರ ತಡೆ

ಕುಂಬಳೆ: ಕುಂಬಳೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಗೆ ನಾಗರಿಕರು ತಡೆಯೊಡ್ಡಿದ ಘಟನೆ ನಡೆದಿದೆ. ಕುಂಬಳೆ ಪೇಟೆಯ ಬದಿಯಡ್ಕ ರಸ್ತೆ ಸಮೀಪ ಶೌಚಾಲ ಯ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ಸ್ಥಳ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿತ್ತು. ಇಂದು ಬೆಳಿಗ್ಗೆ ಬಿಜೆಪಿ ನೇತಾರ ರಮೇಶ್ ಭಟ್ ನೇತೃತ್ವದ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದ್ದಾರೆ.

ಶೌಚಾಲಯ ನಿರ್ಮಾಣ ನಡೆಯುವ ಸ್ಥಳದ ಬದಿಯಲ್ಲೇ ಖಾಸಗಿ ಸ್ಥಳವಿದೆ. ಆ ಸ್ಥಳಕ್ಕೆ ಅಡ್ಡವಾಗಿ ಶೌಚಾಲಯ ಕಟ್ಟಡ ನಿರ್ಮಾಣವಾಗುವುದನ್ನು ವಿರೋಧಿಸಿ ಕಾಮಗಾರಿಗೆ ತಡೆಯೊಡ್ಡಿರುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page