ಕುಂಬಳೆಯ ವೈದ್ಯರ ಎರಡೂವರೆ ಲಕ್ಷ ರೂಪಾಯಿ ವಂಚನೆ
ಕುಂಬಳೆ: ಔಷಧಿ ಕಳುಹಿಸಿಕೊಡುವುದಾಗಿ ತಿಳಿಸಿ ಖಾಸಗಿ ವೈದ್ಯರ ೨,೫೦,೦೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಕುಂಬಳೆ ಪೇಟೆಯ ಸ್ಟಾರ್ ಕ್ಲಿನಿಕ್ ಮಾಲಕ ಡಾ| ಅಬ್ದುಲ್ ಹಮೀದ್ರ ದೂರಿನಂತೆ ಕುಂಬಳೆ ಪೊಲೀಸರು ಬೆಂಗಳೂರಿನ ಎಕ್ಸಸ್ ಹೆಲ್ತ್ ಇಂಟರ್ನ್ಯಾಶನಲ್ ಕಂಪೆನಿ ಮೆನೇಜರ್ ಸುರೇಂದ್ರ ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಔಷಧಿ ಕಳುಹಿಸಿ ಕೊಡಲು ಆನ್ಲೈನ್ ಮೂಲಕ ಹಣ ಕಳುಹಿಸಿಕೊಟ್ಟಿರುವುದಾಗಿಯೂ ಆದರೆ ಔಷಧಿ ಕಳುಹಿಸದೆ ವಂಚಿಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.