ಕುಂಬಳೆ  ಕ್ಷೇತ್ರ ಬ್ರಹ್ಮಕಲಶೋತ್ಸವ: ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಇಂದಿನಿಂದ ನಡೆಯಲಿರುವ  ಬ್ರಹ್ಮಕಲಶೋತ್ಸ ವದಂಗವಾಗಿ ವಾಹನ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಸರಕಾರಿ ಹೈಸ್ಕೂಲ್ ಕ್ರಾಸ್ ರೋಡ್, ಹೋಲಿ ಫ್ಯಾಮಿಲಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಕುಂಬಳೆ ಪೊಲೀಸ್ ಠಾಣೆ ಪರಿಸರದಲ್ಲಿ ಪ್ರತ್ಯೇಕವಾಗಿ ಏರ್ಪಡಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸಬೇಕಾಗಿದೆ. ಸುಳ್ಯ, ಪುತ್ತೂರು, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಬಂಬ್ರಾಣ, ಕಾಸರಗೋಡು ಭಾಗದಿಂದ ಆಗಮಿಸುವ ದ್ವಿಚಕ್ರ ವಾಹನಗಳು ಕುಂಬಳೆ ಜಿಎಸ್‌ಬಿಎಸ್ ಶಾಲೆಯ ಆಟದ ಮೈದಾನದಲ್ಲಿ ನಿಲುಗಡೆ ಮಾಡಬೇಕಾಗಿದೆ. ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ಬಂಟ್ವಾಳ, ಮಂಜೇಶ್ವರ, ಉಪ್ಪಳ, ಬಾಯಾರು,  ಕಳತ್ತೂರು ಭಾಗಗಳಿಂದ ಬರುವ ವಾಹನಗಳಿಗೆ  ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಪಾರ್ಕಿಂಗ್ ಸೌಕರ್ಯ ಏರ್ಪಡಿಸಲಾಗಿದೆ. ಇದಲ್ಲದೆ ಶೇಡಿಕಾವು ಶಿವಕ್ಷೇತ್ರ ಪರಿಸರ, ಚಿರಂಜೀವಿ ರಸ್ತೆ, ರಾಜೇಶ್ ಶೆಣೈಯವರು ನೀಡಿದ ಸ್ಥಳದಲ್ಲಿ ಪಾರ್ಕಿಂಗ್‌ಗೆ ಸೌಕರ್ಯ ಏರ್ಪಡಿಸಲಾಗಿದೆಯೆಂದು ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಘುನಾಥ ಪೈ, ಜಯಕುಮಾರ್, ಮಂಜುನಾಥ ಆಳ್ವ, ಸುಧಾಕರ ಕಾಮತ್, ಕೆ.ಸಿ. ಮೋಹನ್, ವಿಕ್ರಂ ಪೈ, ಶಂಕರ ಅಡಿಗ, ಶಂಕರ ಆಳ್ವ, ಲಕ್ಷ್ಮಣ ಪ್ರಭು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page