ಕುಂಬಳೆ ಪೇಟೆ ಶುಚೀಕರಣ
ಕುಂಬಳೆ: ಉತ್ಸವಗಳನ್ನು ಶುಚಿ ಯಾಗಿ ಆಚರಿಸಬೇಕೆಂಬ ಸಂದೇಶ ದೊಂದಿಗೆ ಕುಂಬಳೆ ಪೇಟೆಯನ್ನು ಶುಚೀಕರಿಸಲಾಯಿತು. ಈ ತಿಂಗಳ ೧೬ರಿಂದ ೨೯ರವರೆಗೆ ನಡೆಯುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಅಂಗವಾಗಿ ಶುಚೀಕರಣ ನಡೆಸಲಾಗಿದೆ. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಶುಚೀಕರಣ ಉದ್ಘಾಟಿಸಿದರು. ಸದಸ್ಯರಾದ ಸಬೂರ, ಮೋಹನನ್, ಅನಿಲ್, ವಿವೇಕಾನಂದ ಶೆಟ್ಟಿ, ಪ್ರೇಮಾವತಿ, ವಿದ್ಯಾ ಎನ್. ಪೈ, ಸುಲೋಚನ, ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ಭಾಗವಹಿಸಿದರು.