ಕುಂಬಳೆ ಪೊಲೀಸ್ ಠಾಣೆ ಪರಿಸರದಲ್ಲಿ ನಾಗರಹಾವು ಪ್ರತ್ಯಕ್ಷ
ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ಪರಿಸರದಲ್ಲಿ ನಾಗರಹಾ ವೊಂದು ಪ್ರತ್ಯಕ್ಷಗೊಂಡು ಭಯಮೂಡಿಸಿದೆ.
ಠಾಣೆಯ ಕಂಪೌಂಡ್ ಬಳಿ ನಿಲುಗಡೆಗೊಳಿಸಿದ್ದ ವಾಹನದ ಅಡಿಭಾಗದಲ್ಲಿ ನಿನ್ನೆ ಸಂಜೆ ಹಾವು ಕಾಣಿಸಿದೆ. ವಾಹನದ ಅಡಿಭಾಗದಲ್ಲಿ ಯಾವುದೋ ಜೀವಿ ಚಲಿಸುವುದು ಕಂಡುಬಂದಿತ್ತು. ಇದರಿಂದ ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ ನಾಗರಹಾವು ಹೆಡೆ ಬಿಚ್ಚಿ ನಿಂತಿದೆ. ದೀರ್ಘ ಹೊತ್ತು ಹಾವು ಅಲ್ಲಿಯೇ ಉಳಿದುಕೊಂಡಿತ್ತು. ಇದು ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಭಯ ಹುಟ್ಟಿಸಿದೆ. ಈಬಗ್ಗೆ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ತಲುಪಿ ಹಾವನ್ನು ಹಿಡಿದು ಕೊಂಡೊಯ್ಯು ಅರಣ್ಯದಲ್ಲಿ ಬಿಟ್ಟಿದ್ದಾರೆ.