ಕುಂಬಳೆ ಬಟ್ಟೆ ಅಂಗಡಿಯಲ್ಲಿ ಘರ್ಷಣೆ ಮಾಲಕ, ಗ್ರಾಹಕನಿಗೆ ಗಾಯ
ಕುಂಬಳೆ: ಕುಂ ಬಳೆ ಪೇಟೆಯ ಬಟ್ಟೆ ಬರೆ ಅಂಗಡಿಯಲ್ಲಿ ನಿನ್ನೆ ಸಂಜೆ ಮಾಲಕ ಹಾಗೂ ಗ್ರಾಹಕನ ಮಧ್ಯೆ ನಡೆದ ವಾಗ್ವಾದ ಘರ್ಷಣೆಯಲ್ಲಿ ಕೊನೆಗೊಂಡಿದೆ. ಇಲ್ಲಿನ ಶಾಲಿಮಾರ್ ಟೆಕ್ಸ್‌ಟೈಲ್ಸ್ ಮಾಲಕ ಕುಂಬಳಯ ಅಬ್ದುಲ್ಲ, ಗ್ರಾಹಕ ಆರಿಕ್ಕಾಡಿ ಕಡವತ್ತ್‌ನ ಸಫ್ವಾನ್ ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘರ್ಷಣೆಯಿಂದಾಗಿ ಅಂಗಡಿ ಗಾಜು ಪುಡಿಗೈಯ್ಯಲ್ಪಟ್ಟಿದೆ. ನಿನ್ನೆ ಸಂಜೆ ಸಫ್ವಾನ ತಾಯಿ ಹಾಗೂ ಸಹೋದರಿಯೊಂದಿಗೆ ಬಟ್ಟೆಬರೆ ಖರೀದಿಸಲು ಅಂಗಡಿಗೆ ತಲುಪಿದ್ದರು. ಈ ವೇಳೆ ಅವರು ಆಗ್ರಹಪಟ್ಟ ರೀತಿಯ ಬಟ್ಟೆಬರೆ ಇಲ್ಲವೆಂದು ಮಾಲಕ ತಿಳಿಸಿದ್ದಾರೆನ್ನಲಾಗಿದೆ. ಇದರಿಂದ ಅವರು ಅಂಗಡಿಯಿಂದ ಮರಳಿದ್ದು ಈ ವೇಳೆ ಅಂಗಡಿ ಮಾಲಕ ಅಬ್ದುಲ್ಲ ಹಾಗೂ ಸಫ್ವಾನ ಮಧ್ಯೆ ವಾಗ್ವಾದವುಂಟಾಗಿತ್ತೆನ್ನಲಾಗಿದೆ. ಬಳಿಕ ಅಲ್ಲಿಂದ ಮರಳಿದ ಅಲ್ಪ ಹೊತ್ತಿನಲ್ಲಿ ಮತ್ತಿಬ್ಬರೊಂದಿಗೆ ಅಂಗಡಿಗೆ ತಲುಪಿ ಅಂಗಡಿ ಮಾಲಕನೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೈದಿರುವುದಾಗಿ ಅಬ್ದುಲ್ಲ ತಿಳಿಸಿದ್ದಾರೆ. ವ್ಯಾಪಾರಿ ನೇತಾರರು ಆಸ್ಪತ್ರೆಗೆ ತೆರಳಿ ಅಬ್ದುಲ್ಲರನ್ನು ಸಂದರ್ಶಿಸಿದರು. ವ್ಯಾಪಾರಿ ವಿರುದ್ಧ ನಡೆದ ಹಲ್ಲೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.