ಕುಂಬಳೆ ಬಿಜೆಪಿಯಿಂದ ಕಾರ್ಗಿಲ್ ವಿಜಯೋತ್ಸವ
ಕುಂಬಳೆ: ಬಿಜೆಪಿ ಕುಂಬಳೆ ಪಂ ಚಾಯತ್ ಸಮಿತಿ ವತಿಯಿಂದ ಪಕ್ಷದ ಕಚೇರಿಯಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸ ಲಾಯಿತು. ಬಿಜೆಪಿ ಕುಂಬಳೆ ಪಂಚಾಯತ್ ಅಧ್ಯಕ್ಷÀ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವರವರು ಉದ್ಘಾಟಿಸಿದರು. ಕುಂಬಳೆ ಉತ್ತರ ವಲಯ ಅಧ್ಯಕ್ಷÀ ಪ್ರದೀಪ್ ಆರಿಕಾಡಿ, ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಕಾರ್ಯದರ್ಶಿ ಕೆ. ಸುಧಾಕರ್ ಕಾಮತ್, ಪಂಚಾಯತ್ ಸದಸ್ಯೆ ಪುಷ್ಪ ಲತಾ ಕಾಜೂರ್, ಯುವಮೋರ್ಚ್ ಕುಂಬಳೆ ಅಧ್ಯಕ್ಷ ಅಜಿತ ಕುಮಾರ್, ಹಿರಿಯರಾದ ಗೋಪಾಲ ಕಂಚಿಕಟ್ಟೆ, ಶಶಿ ಕುಂಬಳೆ ವೇಣು ಕಂಚಿಕಟ್ಟೆ, ವರುಣ ಕುಮಾರ್ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯೆ ಪ್ರೇಮಾವತಿ ಸ್ವಾಗತಿಸಿ, 144 ನೇ ಬೂತ್ ಅಧ್ಯಕ್ಷ ಪ್ರಶಾಂತ್ ಪಿ.ಎಚ್. ವಂದಿಸಿದರು.