ಕುಂಬಳೆ: ಹಿರಿಯ ವ್ಯಾಪಾರಿ ನಿಧನ
ಕುಂಬಳೆ; ಕುಂಬಳೆಯಲ್ಲಿ ಮೆಡಿಕಲ್ ವ್ಯಾಪಾರಿಯಾಗಿದ್ದ ಕುಂಬಳೆ ರಾಮನಗರ ನಿವಾಸಿ ಎಂ. ನಾರಾಯಣ ಶೆಣೈ (ಯೋಗೀಶ ಶೆಣೈ) (70) ನಿಧನ ಹೊಂದಿದರು. ಬಿಜೆಪಿಯ ಹಿರಿಯ ಕಾರ್ಯ ಕರ್ತರಾಗಿದ್ದ ಇವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು. ಮೃತದೇಹದ ಅಂತ್ಯಸಂಸ್ಕಾರ ಕುಂಬಳೆ ಜಿಎಸ್‌ಬಿ ರುದ್ರಭೂಮಿಯಲ್ಲಿ ನಡೆಸಲಾ ಯಿತು. ಮೃತರು ಸಹೋದರ-ಸಹೋದರಿಯರಾದ ವೆಂಕಟೇಶ್ ಶೆಣೈ, ಮಧುಸೂದನ ಶೆಣೈ, ರಜನಿ, ಶಶಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.