ಕುಂಬ್ಡಾಜೆ ಪಂ.ನಲ್ಲಿ ಬಿಜೆಪಿ ಪ್ರತಿಭಟನೆ
ಕುಂಬ್ಡಾಜೆ: ಪಂಚಾಯತ್ ದುರಾಡಳಿತ ಹಾಗೂ ಅಂಗನವಾಡಿ ಸಹಾಯಕ ನೇಮಕಾತಿಯಲ್ಲಿ ಬಿಜೆಪಿಯನ್ನು ಅವಗಣಿಸುವ ಐಕ್ಯರಂಗ, ಸಿಪಿಐ ಆಡಳಿತ ಸಮಿತಿ ವಿರುದ್ಧ ಪಂಚಾಯತ್ನಲ್ಲಿ ಇಂದು ಬೆಳಿಗ್ಗೆ ತುರ್ತು ಪ್ರತಿಭಟನೆ ನಡೆಸ ಲಾಯಿತು. ಬಿಜೆಪಿ ಪಂ. ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಮಂಡಲ ಕಾರ್ಯ ದರ್ಶಿ ರವೀಂದ್ರ ರೈ ಗೋಸಾಡ, ಜಿ.ಪಂ. ಸದಸ್ಯೆ ಶೈಲಜಾ ಭಟ್,ಕೃಷ್ಣ ಶರ್ಮಾ ಜಿ, ಬ್ಲಾಕ್ ಪಂ. ಸದಸ್ಯೆ ಯಶೋದಾ ಎನ್, ನಳಿನಿಕೃಷ್ಣ, ವಾರ್ಡ್ ಪ್ರತಿನಿಧಿಗಳಾದ ಸುಂದರ ಮವ್ವಾರು,ಸುನಿತಾ ಜಿ. ರೈ, ಮೀ ನಾಕ್ಷಿ ಎಸ್, ಜಯಪ್ರಕಾಶ್ ಶೆಟ್ಟಿ, ಸುರೇಶ್ ಬಿ.ಕೆ, ರೋಶನಿ ಪೊಡಿಪ್ಪಳ್ಳ, ರಾಘವೇಂದ್ರ ಮೈಲ್ತೊಟ್ಟಿ, ವಾಸುದೇವ ಭಟ್, ಉಪ್ಪಂಗಳ ಚಂದ್ರಹಾಸ ರೈ, ಜಯಂತಿ ಎಸ್ ರೈ ಭಾಗವಹಿಸಿದರು.