ಕುಂಬ್ಡಾಜೆ- ಬೆಳಿಂಜ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ: ಶಾಸಕರ ನೇತೃತ್ವದಲ್ಲಿ ಡೆಪ್ಯುಟಿ ಚೀಫ್ ಇಂಜಿನಿಯರ್‌ಗೆ ಮುಸ್ಲಿಂ ಲೀಗ್ ಮನವಿ
ಕುಂಬ್ಡಾಜೆ: ಬೆಳಿಂಜ- ಕುಂಬ್ಡಾಜೆ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಂಡು ಬರುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಕಾಸರಗೋಡು ಇಲೆಕ್ಟ್ರಿಕಲ್ ಸರ್ಕಲ್ ಡೆಪ್ಯುಟಿ ಚೀಫ್ ಇಂಜಿನಿಯರ್‌ಗೆ ಮುಸ್ಲಿಂಲೀಗ್ ಕುಂಬ್ಡಾಜೆ ಪಂಚಾಯತ್ ಸಮಿತಿ ಮನವಿ ನೀಡಿದೆ. ಶಾಸಕ ಎನ್.ಎ. ನೆಲ್ಲಿಕುನ್ನುರ ಉಪಸ್ಥಿತಿಯಲ್ಲಿ ಮುಸ್ಲಿಂ ಲೀಗ್ ಮುಖಂಡರಾದ ಅಲಿ ತುಪ್ಪೆಕ್ಕಲ್ಲು, ಬಿ.ಟಿ. ಅಬ್ದುಲ್ಲ ಕುಂಞಿ, ಫಾರೂಕ್ ಕುಂಬ್ಡಾಜೆ, ಎಸ್. ಮುಹ ಮ್ಮದ್, ರಶೀದ್ ಬೆಳಿಂಜ ಎಂಬಿವರು ತಂಡದಲ್ಲಿದ್ದರು. ಇಲೆಕ್ಟ್ರಿಕಲ್ ಸೆಕ್ಷನ್ ವ್ಯಾಪ್ತಿಯ ಮಾವಿನಕಟ್ಟೆ ಫೀಡರ್‌ನಲ್ಲಿ ಪಿಲಾಂಕಟ್ಟೆ- ಅಗಲ್ಪಾಡಿ, ಪೊಡಿಪ್ಪಳ್ಳ- ನೇರಪ್ಪಾಡಿ ಮೂಲಕ ಕಾಡು ಪ್ರದೇಶ ದಾಟಿ ಸುಮಾರು ೩ ಕಿಲೋ ಮೀಟರ್ ದೂರದಲ್ಲಿ ಉದಯಪುರ, ಉದಿಂಗಿಲ, ತುಪ್ಪೆಕಲ್ಲು, ಬಿ.ಜಿ. ಸರ್ಕಲ್, ಬೆಳಿಂಜ ಟವರ್, ಬೆಳಿಂಜ ಪೇಟೆ, ಪೊಸಳಿಗೆ, ಕರ್ಕಡಗೋಳಿ ಎಂಬೀ ಟ್ರಾನ್ಸ್‌ಫಾರ್ಮರ್‌ಗಳಿಗೆ ಈಗ ವಿದ್ಯುತ್ ತಲುಪುತ್ತಿದೆ.