ಕುಖ್ಯಾತ ವಾಹನ ಕಳವು ಆರೋಪಿಗಾಗಿ ಲುಕೌಟ್ ನೋಟೀಸ್ ಜ್ಯಾರಿ
ಕಾಸರಗೋಡು: ಕದ್ದ ಟಿಪ್ಪರ್ ಲಾರಿಯನ್ನು ಹರಿಸಿ ಪೊಲೀಸರನ್ನು ಕೊಲೆಗೈಯ್ಯಲೆತ್ನಿಸಿದ ಕುಖ್ಯಾತ ವಾಹನ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ.
ಚಟ್ಟಂಚಾಲ್ ತೆಕ್ಕಿಲ್ ನಂಬಿಡಿಪಳ್ಳಂ ಹೌಸ್ನ ಮೊಹಮ್ಮದ್ ರಂಝಾನ್ ಅಲಿಯಾಸ್ ರಂಝಾನ್ (೨೫) ಎಂಬಾತನ ಪತ್ತೆಗಾಗಿ ಚೀಮೇನಿ ಪೊಲೀಸರು ಈ ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಬೇಕಲ, ಹೊಸದುರ್ಗ, ಕಣ್ಣಾಪುರಂ ಮತ್ತು ವಡಗರ ಪೊಲೀಸ್ ಠಾಣೆಗಳಲ್ಲೂ ಹಲವು ಕೇಸುಗಳಿವೆ ಎಂದು ಲುಕೌಟ್ ನೋಟೀಸ್ನಲ್ಲಿ ತಿಳಿಸಲಾಗಿದೆ.
ಕಳೆದ ಮೇ ೨೪ರಂದು ಚೀಮೇನಿ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಲುಕೌಟ್ ನೋಟೀಸ್ ಜ್ಯಾರಿಗೊಳಿಸಲಾಗಿದೆ. ವಡಗರದಿಂದ ಕದ್ದು ಸಾಗಿಸಲಾದ ಲಾರಿಯನ್ನು ಚೀಮೇನಿ ಮೂಲಕ ಸಾಗಿಸಲೆತ್ನಿಸುವ ವೇಳೆ ವಡಗರ ಸೈಬರ್ ಸೆಲ್ ನೀಡಿದ ಮಾಹಿತಿಯಂತೆ ಆ ಲಾರಿಯನ್ನು ಚೀಮೇನಿ ಬಳಿ ಚೀಮೇನಿ ಪೊಲೀಸರು ವಶಪಡಿಸಲೆತ್ನಿಸಿದ ವೇಳೆ ಎಸ್ಐ ಪಿ.ವಿ. ರಾಮಚಂದ್ರನ್ರ ನೇತೃತ್ವದ ಪೊಲೀಸರ ಮೇಲೆ ಅದನ್ನು ಹರಿಸಿ ಅವರನ್ನು ಕೊಲೆಗೈಯ್ಯಲೆತ್ನಿಸಿದ ದೂರಿನಂತೆ ಚೀಮೇನಿ ಪೊಲೀಸರು ರಂಝಾನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಲುಕೌಟ್ ನೋಟೀಸ್ ಜ್ಯಾರಿಗೊಳಿಸಲಾಗಿದೆ.