ಕುಡಾಲು ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪೂರ್ವಭಾವಿ ಸಭೆ
ಉಪ್ಪಳ: ಕುಡಾಲು ಶ್ರೀ ಕೋಮ ರಾಯ ಚಾಮುಂಡಿ ದೈವಸ್ಥಾನದ ನೂತನ ಅಶ್ವತ್ಥ ಕಟ್ಟೆಯ ಮತ್ತು ನವೀ ಕರಣಗೊಂಡ ದೈವಸ್ಥಾ ನದಲ್ಲಿ ಶ್ರೀ ದೈವದ ಪ್ರತಿಷ್ಠೆ ಕಾರ್ಯದ ಅಂಗವಾಗಿ ಜೀರ್ಣೋದ್ಧಾರ ಸಮಿತಿಯ ಪೂರ್ವ ಭಾವಿ ಸಭೆ ನಡೆಯಿತು. ಸಮಿತಿಯ ಗೌವರಾಧ್ಯಕ್ಷ ಬಾಬು ಕುಬಣೂರು ಅಧ್ಯಕ್ಷತೆ ವಹಿಸಿದರು. ಸಮಿತಿಯ ಅಧ್ಯಕ್ಷ ವಿಜಯ್ ಪಂಡಿತ್ ಮಾಹಿತಿ ನೀಡಿದರು. ಬಾಕುಡ ಸಮಾಜದ ೧೮ ದೈವಸ್ಥಾನದ ಹಿರಿಯವರ ಒಕ್ಕೂಟದ ಅಧ್ಯಕ್ಷ ಶಂಕರ ಅಡ್ಕ, ವಾಮನ, ಭಾಸ್ಕರ, ನ್ಯಾಯವಾದಿ ಭರತ್ರಾಜ್ ಅಟ್ಟೆಗೋಳಿ, ಕೇಶವ ಅಂಗಡಿಪದವು, ಉದಯ, ವಾಮನ ಸಾಗ್, ಪ್ರವೀಣ ಬೇಕೂರು, ನೇಮು ಕಾರ್ನವರ್, ಮಂಜು ಕಾರ್ಲೆ, ಬಾಕುಡ ಸಮಾಜದ ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಮಂಜೇಶ್ವರ, ರಾಜೇಶ್ ಕೊಡ್ಲಮೊಗರು, ಮುರುಗೇಶ್, ಪ್ರವೀಣ್ ಕೊಡೆಂಚಿರ್, ದಾಮೋದರ್ ಮಾತನಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಶ್ರೀರಾಮ ಕುಳೂರು ಸ್ವಾಗತಿಸಿ, ವಿಠಲ ನಾರಾಯಣ ಬಂಬ್ರಾಣ ವಂದಿಸಿದರು. ಜನವರಿ ೮ರಂದು ಪ್ರತಿಷ್ಠಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.