ಕುಡಿಯುವ ನೀರು ಮೊಟಕು: ದೂರು ಹೇಳಲು ತೆರಳಿದ ವ್ಯಕ್ತಿಗೆ ಪಂ. ಸದಸ್ಯ ಹಲ್ಲೆ ಆರೋಪ
ಬದಿಯಡ್ಕ: ಕಳೆದ ಎರಡು ದಿನ ಗಳಿಂದ ಕುಡಿಯುವ ನೀರು ವಿತರಣೆ ಗೊಂಡಿಲ್ಲ ಎಂದು ದೂರು ನೀಡಲು ತೆರಳಿದ ವ್ಯಕ್ತಿಗೆ ಪಂ. ಸದಸ್ಯ ಬೆದರಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾ ಗಿದೆ. ಪಳ್ಳತ್ತಡ್ಕದಲ್ಲಿ ವಾಸಿಸುವ ಕೂಲಿ ಕಾರ್ಮಿಕ ಕೃಷ್ಣ (೫೬) ನಿನ್ನೆ ಪಂ. ಸದಸ್ಯ ಹಮೀದ್ ಪಳ್ಳತ್ತಡ್ಕರಲ್ಲಿ ನೀರು ವಿತರಣೆ ಮೊಟಕು ಬಗ್ಗೆ ತಿಳಿಸಲು ಬುಧವಾರ ಸಂಜೆ ೭ ಗಂಟೆ ವೇಳೆ ತೆರಳಿದ್ದರು. ಪಂ. ಸದಸ್ಯ ಪಳ್ಳತ್ತಡ್ಕದ ಅಂಗಡಿಯಲ್ಲಿರು ವುದನ್ನು ಕಂಡು ಕೃಷ್ಣ ಅಲ್ಲಿಗೆ ತೆರಳಿದ್ದರು. ಈ ವೇಳೆ ಸದಸ್ಯ ಬೆದರಿಸಿ ಹಲ್ಲೆಗೈದಿ ರುವುದಾಗಿ ಕೃಷ್ಣ ದೂರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆಂದಿದ್ದಾರೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ತಿಳಿಸಿದಾಗ ಇಂದು ಠಾಣೆಗೆ ಬರಲು ಎಸ್.ಐ. ತಿಳಿಸಿದ್ದಾರೆನ್ನಲಾಗಿದೆ.