ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವರ್ಧಂತ್ಯುತ್ಸವ 16ರಂದು
ಬೇಕೂರು: ಕುಬಣೂರು ಶ್ರೀರಾಮ್ ಐಡೆಡ್ ಅಪ್ಪರ್ ಪ್ರೈಮರಿ ಶಾಲಾ ವರ್ಧಂತ್ಯುತ್ಸವ ಜ.16ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ. ಬೆಳಿಗ್ಗೆ 9.30ಕ್ಕೆ ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸುವುದ ರೊಂದಿಗೆ ವರ್ದಂತ್ಯುತ್ಸವಕ್ಕೆ ಚಾಲನೆ ನೀಡುವರು. 10ಗಂಟೆಗೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 10.30ಕ್ಕೆ ನಡೆಯುವ ವರ್ಧಂತಿ ಸಭೆಯನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್ ಉದ್ಘಾಟಿಸುವರು. ಮಂಜೇ ಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜ ಗೋಪಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ಉದ್ಯಮಿ ಲಂಚುಲಾಲ್ ಕೆ.ಎಸ್, ಮಂಜೇಶ್ವರ ಬಿ.ಪಿ.ಸಿ ಜೋಯ್.ಜಿ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 8.30ರಿಂದ ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ಮತ್ತು ವಿವಿಧ ಕಾರ್ಯಕ್ರಮಗಳು ನಡೆಯಲಿದೆ.