ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಶಾಲೆಯ ಮೆನೇಜರ್ ನಿಧನ
ಪೈವಳಿಕೆ: ಕುರುಡಪದವು ಕುರಿಯ ವಿಠಲಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ಮೆನೇಜರ್, ಧಾರ್ಮಿಕ ಮುಂದಾಳು, ಸಮಾಜ ಸೇವಕ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ (65) ಇಂದು ಬೆಳಿಗ್ಗೆ ನಿಧನ ಹೊಂದಿದರು. ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ಮಕ್ಕಳಾದ ಗಂಗಾಲಕ್ಷ್ಮಿ, ಶ್ರೀರಾಮ ಶಾಸ್ತ್ರಿ, ಅಳಿಯ ಅಪೂರ್ವ ಭಟ್, ಸಹೋದರರಾದ ಗಣಪತಿ ಶಾಸ್ತ್ರಿ (ಭಾಗವತರು), ಮಹಾಬಲ ಶಾಸ್ತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ರಾಮಶಾಸ್ತ್ರಿ, ತಾಯಿ ಗಂಗಮ್ಮ, ಪತ್ನಿ ಸಾವಿತ್ರಿ, ಸಹೋದರರಾದ ನಾರಾಯಣ ಶಾಸ್ತ್ರಿ, ಶ್ರೀನಿವಾಸ ಶಾಸ್ತ್ರಿ ಈ ಹಿಂದೆ ನಿಧನರಾಗಿದ್ದಾರೆ.
ನಿಧನ ವಾರ್ತೆ ತಿಳಿದು ಶಾಲೆಯ ಸಿಬ್ಬಂದಿಗಳು, ಅಧ್ಯಾಪಕ, ವಿದ್ಯಾರ್ಥಿವೃಂದದವರು, ಹಿತೈಷಿಗಳು, ಸ್ಥಳೀಯರು ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ. ನಿಧನಕ್ಕೆ ಶ್ರೀರಾಮ ಭಜನಾ ಮಂದಿರ ಸಮಿತಿ, ವಾರಾಹಿ ಸೇವಾ ಸಮಿತಿ ಕುರುಡಪದವು ಸಂತಾಪ ಸೂಚಿಸಿದೆ.