ಕುಳದಪಾರೆಯಲ್ಲಿ ಒತ್ತೆಕೋಲ ಮಹೋತ್ಸವ 21, 22ರಂದು


ಮುಳ್ಳೇರಿಯ: ಕುಳದಪಾರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಈತಿಂಗಳ 21 ಹಾಗೂ 22ರಂದು ನಡೆಯಲಿದೆ.
21ರಂದು ರಾತ್ರಿ 7 ಗಂಟೆಗೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, 22ರಂದು ಮುಂಜಾನೆ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ, ಬೆಳಿಗ್ಗೆ 7ರಿಂದ ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ 21ರಂದು ರಾತ್ರಿ 9ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂ ದ ವಿವಿಧ ಕಾರ್ಯಕ್ರಮ, 9.30ರಿಂದ ಗಜಾನನ ನಾಟ್ಯಾಂಜಲಿ ಮುಳ್ಳೇರಿಯ ಅವರಿಂದ ನೃತ್ಯ ಶಿಲ್ಪಂ, ಗಂಟೆ 1ರಿಂದ ಮಹಾವಿಷ್ಣು ಯಕ್ಷಗಾನ ಕಲಾ ಸಂಘ ಸುಳ್ಯಪದವು ಇವರಿಂದ ಯಕ್ಷಗಾನ ಬಯಲಾಟ ‘ಶ್ರೀ ಹರಿದರ್ಶನ’ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page