ಕುಸಿದುಬೀಳಲು ಕಾಯುತ್ತಿದೆ ವಿದ್ಯುತ್ ಕಂಬ: ಅಪಾಯ ಆಹ್ವಾನ ಭೀತಿ
ಉಪ್ಪಳ: ಕುಸಿದು ಬೀಳಲು ಸಿದ್ಧವಾಗಿರುವ ಹಲವು ವಿದ್ಯುತ್ ಕಂಬಗಳು ಸ್ಥಳೀಯರಿಗೆ ಬೆದರಿಕೆ ಸೃಷ್ಟಿಸುತ್ತಿವೆ. ಮಂಗಲ್ಪಾಡಿ ಪಂಚಾ ಯತ್ನ ಉಪ್ಪಳ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳು ವಾಲಿ ನಿಂತಿವೆ. ಚರಂಡಿಯಲ್ಲೇ ಕಂಬವಿದ್ದು ಮಳೆ ನೀರು ಹರಿಯುವ ವೇಳೆ ಕಂಬ ಒಂದು ಬದಿಗೆ ವಾಲಿ ನಿಂತಿದೆ. ಅಲ್ಲದೆ ತುಕ್ಕು ಹಿಡಿದು ಶೋಚನೀಯಾವಸ್ಥೆಯಲ್ಲಿದೆ. ಈ ಕಂಬ ಯಾವುದೇ ಕ್ಷಣ ಮುರಿದು ಅಥವಾ ಕುಸಿದು ಬೀಳಬಹುದೆಂಬ ಭೀತಿ ಸ್ಥಳೀಯರಲ್ಲಿದೆ.
ಈ ಪರಿಸರರದಲ್ಲಿ ಹಲವಾರು ಮನೆಗಳ, ಮದ್ರಸ ಸಹಿತ ವಿವಿಧ ಕಡೆಗೆ ದಿನವೂ ಜನರು ಸಂಚರಿಸುವ ರಸ್ತೆ ಇದ್ದು, ಕಂಬ ಕುಸಿದು ಬಿದ್ದರೆ ಭಾರೀ ಅಪಾಯ ಸಂಭವಿಸಬಹುದೆಂಬ ಭೀತಿ ಇದೆ. ಕಂಬ ಅಪಾಯ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.