ಕೃಷಿಕ ನಿಧನ
ಮುಳ್ಳೇರಿಯ: ಕಾನಕ್ಕೋಡು ಬೇತಾಳಮೂಲೆ ನಿವಾಸಿ ಕೃಷಿಕ ವಳಮಲೆ ಜನನ ವಿಶ್ವನಾಥ ರೈ (72) ನಿನ್ನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಕುಸುಮಾವತಿ ವಿ. ರೈ, ಮಕ್ಕಳಾದ ಚಂದ್ರನಾಥ ರೈ, ಸಚ್ಚಿದಾನಂದ ರೈ, ವಿದ್ಯಾಮಣಿ ಎ. ಶೆಟ್ಟಿ, ಸೊಸೆಯಂದಿರಾದ ಶಶಿಕಲ ಸಿ. ರೈ, ರಶ್ಮಿ ಎಸ್. ರೈ, ಅಳಿಯ ಅಮರನಾಥ ಶೆಟ್ಟಿ ಚಟ್ಲ, ಸಹೋದರಿಯರಾದ ಸುಂದರಿ ಎನ್. ರೈ ಬೆಳಿಂಜ, ರಾಜೀವಿ ಬಿ. ರೈ ಮಲ್ಲಾವರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಿವಿಧ ಸಂಘಸಂಸ್ಥೆಗಳ ಮುಖಂಡರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.