ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕನಾದ ಬಾಲಕನಿಗೆ ಕಿರುಕುಳ: ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು
ಕಾಸರಗೋಡು: ತಾಯಿ ಜೊತೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲ್ಲಿ ಪ್ರಯಾಣಿ ಸುತ್ತಿದ್ದ ವೇಳೆ ೧೬ರ ಹರೆಯದ ಬಾಲಕನಿಗೆ ಕಂಡಕ್ಟರ್ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮಾನಸಿಕವಾಗಿ ತೀವ್ರ ಅಸ್ವಸ್ಥನಾಗಿದ್ದ ಬಾಲಕನನ್ನು ಕೌನ್ಸೆಲಿಂಗ್‌ಗೊಳ ಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ನೀಲೇಶ್ವರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2024 ಮೇ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ನೀಲೇಶ್ವರ ಬಸ್ ನಿಲ್ದಾಣದಿಂದ ತಾಯಿ ಹಾಗೂ ಪುತ್ರ ಕಣ್ಣೂರಿಗೆ ತೆರಳುವ ಬಸ್ ಹತ್ತಿದ್ದರು. ಪ್ರಯಾಣ ವೇಳೆ ರಾಜೇಶ್ ಎಂಬ ಹೆಸರಿನ ಕಂಡಕ್ಟರ್ ತನಗೆ ಕಿರುಕುಳ ನೀಡಿರುವುದಾಗಿ ಬಾಲಕ ಕೌನ್ಸೆಲಿಂಗ್ ವೇಳೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.